ನೆಲಮಂಗಲ: ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕೊಟ್ಟಿ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲಿ ಅಮಿತ್ ಎಂಬ ವ್ಯಕ್ತಿ ವಿಷ ಸೇವಿಸಿದ ಘಟನೆ ನಡೆದಿದೆ.
ನೆಲಮಂಗಲ ಟೌನ್ ಠಾಣೆ ಇನ್ಸ್‌ಪೆಕ್ಟರ್ ಕುಮಾರ್, ಕಾನ್ಸ್‌ಟೇಬಲ್‌ಗಳಾದ ಬಸವರಾಜು, ಕೇಶವ್ ಮತ್ತು ಗಂಗಣ್ಣ ಸೇರಿ ಹಲವರ ವಿರುದ್ಧ ಅಮಿತ್ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.
ನಾವು ಆಶ್ರಯ ಕೊಟ್ಟ ವ್ಯಕ್ತಿಗಳು ಕೊಲೆ ಮಾಡಿ ಬಂದಿದ್ದಾರೆಂದು ನಮಗೆ ತಿಳಿದಿರಲಿಲ್ಲ. ಹಾಗಾಗಿ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದೆವು. ಇದನ್ನೇ ಕಾರಣವಾಗಿಟ್ಟುಕೊಂಡು ನೀವು ನಮ್ಮ ತಂದೆ ತಾಯಿಗೆ ಹಿಂಸೆಕೊಡುತ್ತಿದ್ದೀರಿ. ಹಾಗಾಗಿ ವಿಷ ಸೇವಿಸುತ್ತಿರುವೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಆರೋಪಿ ವಿಷ ಸೇವಿಸಿದ್ದಾರೆ.
ಸೆಪ್ಟೆಂಬರ್ 19ರಂದು ನೆಲಮಂಗಲ ಟೌನ್ ಸುಭಾಷ್ ನಗರದಲ್ಲಿ ಕೊಲೆಯೊಂದು ನಡೆದಿತ್ತು. ರೇವಂತ್ ಎಂಬಾತನನ್ನು ಕೊಲೆಗೈದಿದ್ದ ಆರೋಪಿಗಳಾದ ಧರಣೇಶ್, ದರ್ಶನ್ ಮತ್ತು ಪ್ರವೀಣ್ ಅವರುಗಳಿಗೆ ಅಮಿತ್ ಅವರು ಆಶ್ರಯ ನೀಡಿದ್ದರು. ಆದರೆ ಅಮಿತ್ ಅವರಿಗೆ ತಾವು ಆಶ್ರಯ ನೀಡಿದ ವ್ಯಕ್ತಿಗಳು ಕೊಲೆ ಆರೋಪಿಗಳು ಎಂದು ತಿಳಿದಿರಲಿಲ್ಲ. ತದ ನಂತರ ಪೊಲೀಸರು ಆಶ್ರಯ ನೀಡಿದ ಕಾರಣ ನೀಡಿ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಮಿತ್ ಆರೋಪಿಸಿ ವಿಷ ಕುಡಿದಿದ್ದಾರೆ.
ಇದೀಗ ಅಮಿತ್’ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.