ಬೆಳಗಾವಿ: ರಾಜ್ಯದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದಂತಾಗಿದೆ. ದಿನಕ್ಕೊಂದು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಳಗಾವಿಯ ಜಿಲ್ಲೆಯ ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆ ಮೇಲೆ ಮಾಲೀಕ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಗೋಕಾಕ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 17ರಂದು ರಾತ್ರಿ ವೇಳೆ ಮಾಲೀಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಆರೋಪಿಯ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಮನೆಯ ಎದುರು ಶೆಡ್ನಲ್ಲಿ ಆಕೆಯ ಕುಟುಂಬ ವಾಸವಿದ್ದರು.ಸಂತ್ರಸ್ತೆ ಪತಿ ಮನೆಯಿಂದ ಹೊರ ಹೋದಾಗ ಮಾಲೀಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸಹಚರನನ್ನು ಶೆಡ್ ಬಳಿ ಕಾವಲಿಗಿರಿಸಿ ಅತ್ಯಾಚಾರ ನಡೆಸಿದ್ದಾನಂತೆ.
ಈ ವೇಳೆ ತಡೆಯಲು ಬಂದ 5 ವರ್ಷ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಶೆಡ್ ಕಾವಲಿಗಿದ್ದ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ ಸಂತ್ರಸ್ತೆ, ಗೋಕಾಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತ್ರಸ್ತೆ, ಆಕೆಯ ಗಂಡ ಮತ್ತು ಐದು ವರ್ಷದ ಮಗು ಆರೋಪಿ ಮನೆಯ ಮುಂದೆ ಒಂದು ಶೆಡ್ನಲ್ಲಿ ವಾಸವಿದ್ದರು.
ಸಂತ್ರಸ್ತೆ ಗಂಡ ಮನೆಯಿಂದ ಹೊರ ಹೋದಾಗ ಮಾಲೀಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಐದು ವರ್ಷ ಮಗ ಕೃತ್ಯ ತಡೆಯಲು ಮುಂದಾಗುತ್ತಾನೆ. ಆದರೆ ಚಿಕ್ಕ ಹುಡುಗನ್ನು ತಳ್ಳುತ್ತಾನಂತೆ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುತ್ತೇನೆ ಎಂದು ಶೆಡ್ ಕಾವಲಿಗಿದ್ದ ವ್ಯಕ್ತಿ ಬೆದರಿಕೆ ಹಾಕಿದ್ದಾನಂತೆ.