dtvkannada

ಹಾಸನ: ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಸಾರ್ವಜನಿಕರು ಮಹಿಳೆಯೋರ್ವಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ನಗರದ ಮಹಾರಾಜ ಪಾರ್ಕ್ನಲ್ಲಿ ನಡೆದಿದೆ. ರಾಧಮ್ಮ ಎಂಬ ಮಹಿಳೆಯ ಮೇಲೆ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸ್ಥಳೀಯರು ಮತಾಂತರ ಯತ್ನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿತ ಮಹಿಳೆ ಪ್ರತಿದಿನ ಉದ್ಯಾನವನಕ್ಕೆ ಆಗಮಿಸಿ ಅಲ್ಲಿಗೆ ಬರುತ್ತಿದ್ದ ಸ್ಥಳೀಯರನ್ನು ಮತಾಂತರವಾಗುವಂತೆ ಪುಸಲಾಯಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ವಿಷಯ ಇಂದು ಸ್ಥಳೀಯರ ಮೂಲಕ ಹಿಂದೂಪರ ಸಂಘಟನೆಗಳಿಗೆ ತಿಳಿದಿದೆ.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯ ಬಳಿ ಇದ್ದ ಮತಾಂತರಕ್ಕೆ ಬಳಸುವ ಪುಸ್ತಕಗಳು ಮತ್ತು ಕರ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!