ಪುತ್ತೂರು, ಸೆ.22: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ, ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಕಟ್ಟತ್ತಾರಿನಲ್ಲಿ ಇಂದು ರಾತ್ರಿ ನಡೆದಿದೆ.
ಬೆಳ್ಳಾರೆಯಿಂದ ಕುಂಬ್ರ ಕಡೆ ಬರುತ್ತಿದ್ದ ಬೈಕ್ ಮತ್ತು ಕುಂಬ್ರದಿಂದ ಕಟ್ಟತ್ತಾರು ಕಡೆ ಸಾಗುತ್ತಿದ್ದ ಆಕ್ಟೀವಾ ನಡುವೆ ಡಿಕ್ಕಿ ಸಂಭವಿಸಿದ್ದು, ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.