ಮಂಗಳೂರು: ಪ್ರೀತಿ ಹೆಸರಿನಲ್ಲಿ ನಂಜನಗೂಡು ಮೂಲದ ಯುವತಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರು ಮುಡಿಪು ನಿವಾಸಿ
ಮೊಹಮ್ಮದ್ ಅಝ್ವಾನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮಂಗಳೂರು ಮೂಲದ ಯುವಕ ನಂಜನಗೂಡು ಮೂಲದ ಯುವತಿಯನನು ಪ್ರೀತಿಸಿ ಮೋಸ ಮಾಡಿದ್ದ. ಬಳಿಕ ಯುವತಿಯ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಒಡ್ಡಿದ್ದ. ಬೆದರಿಕೆ ಹಾಕಿ 35 ಲಕ್ಷ ರೂಪಾಯಿ ಪಡೆದಿರುವ ಆರೋಪವನ್ನು ಕೂಡ ಆತ ಎದುರಿಸುತ್ತಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಯುವತಿ, ಆರೋಪಿ ಮನೆ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದರು. ಈ ವೇಳೆ ಅಜ್ವಾನ್ ಕುಟುಂಬಸ್ಥರು ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿತ್ತು.
ಸೆಪ್ಟೆಂಬರ್ 21 ರಂದು ಮೈಸೂರು ಮೂಲದ ಯುವತಿ ಮಂಗಳೂರಿಗೆ ಬಂದಿದ್ದರು. ಮೈಸೂರಿನಲ್ಲಿ ಮಂಗಳೂರು ಯುವಕನಿಂದ ಲವ್, ಸೆಕ್ಸ್ ದೋಖಾ ಬಗ್ಗೆ ಪ್ರಶ್ನಿಸಲು ಮಂಗಳೂರಿನ ಕೋಣಾಜೆಗೆ ಬಂದಿದ್ದರು. ಈ ವೇಳೆ ಪೊಲೀಸರು ದೂರು ಪಡೆದಿಲ್ಲ ಎಂದು ಆರೋಪ ಕೇಳಿತ್ತು. ದೂರು ನೀಡೋಕೆ ಬಂದಾಕೆಯನ್ನು ಬಸ್ ಹತ್ತಿಸಿ ವಾಪಾಸ್ ಮೈಸೂರಿಗೆ ಕಳುಹಿಸಿದ್ದಾರೆ ಎಂದು ತೇಜಸ್ವಿನಿ ಆರೋಪ ಮಾಡಿದ್ದರು.
ಮೈಸೂರಿನ ಯುವತಿ ತನಗೆ ಮೋಸ ಆಗಿದೆ ಎಂದು ಮಂಗಳೂರಿನ ಯುವಕನ ಮನೆಗೆ ಬಂದಿದ್ದಾಳೆ. ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಆಗ ಆಕೆ ಕೋಣಾಜೆ ಬಸ್ ಸ್ಟಾಂಡ್ಗೆ ಬಂದು ಅಳುತ್ತಾ ಕುಳಿತಿದ್ದಾಳೆ. ಆಗ ಸಾರ್ವಜನಿಕರು 112 ಗೆ ಕರೆ ಮಾಡಿದ್ದಾರೆ. ಪೊಲೀಸರೇ ಬಸ್ ಸ್ಟಾಂಡ್ಗೆ ಹೋಗಿ ಮಹಿಳೆಯ ಕಷ್ಟ ಕೇಳಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>