ಚಿಕ್ಕಮಗಳೂರು, ಸೆ.24: ಮಚ್ಚಿನಿಂದ ಕೊಚ್ಚಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದ ಅಮಾನುಷ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ.
ಸುಧಾ( 48 ) ಕೊಲೆಯಾದ ಮಹಿಳೆಯಾಗಿದ್ದು, ಮಗ ದುಶ್ಯಂತ್ (28) ಹೆತ್ತಮ್ಮನನ್ನೇ ಕೊಲೆ ಮಾಡಿದ್ದಾನೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ ಎನ್ನಲಾಗಿದ್ದು, ಸಂಜೆ 5.45ರ ವೇಳೆಗೆ ಸುಧಾ ಅವರ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಪೊಲೀಸರು ಆರೋಪಿ ದುಶ್ಯಂತ್ ವಶಕ್ಕೆ ಪಡೆದಿದ್ದಾರೆ. ಒಮ್ಮೊಮ್ಮೆ ದುಶ್ಯಂತ್ ಮಾನಸಿಕ ಅಸ್ವಸ್ಥನಂತೆ ವರ್ತಿಸ್ತಿದ್ದ ಎಂದು ತಿಳಿದುಬಂದಿದೆ. ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.