ಕುಂಬ್ರ,ಸೆ ,23:- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ನಡೆಸಿದ್ದು ನಾವೇ ಎಂದು ಬಹಿರಂಗ ವಾಗಿ ಒಪ್ಪಿಕೊಂಡು ಸವಾಲೆಸೆದ ಹಿಂದೂ ಮಹಾಸಭಾ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ SDPI ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಕುಂಬ್ರ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಭಾರತದ ಮೊದಲ ಭಯೋತ್ಪಾದಕ ಕೃತ್ಯವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿ ಒಪ್ಪಿಕೊಂಡು ಇನ್ನೂ ಕೂಡ ಮುಂದುವರೆಸುತ್ತೇವೆ ಎಂದು ಹೇಳಿಕೆ ನೀಡಿದ ಇವರನ್ನು ಬಂಧಿಸಿದರೆ ಸಾಲದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮಾತ್ರವಲ್ಲದೆ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿ ತನಿಖೆ ನಡೆಸಿದರೆ ಮುಂದಕ್ಕೆ ನಡೆಯುವ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ SDPI ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮ ಗಾಂಧೀಯವರನ್ನು ಹತ್ಯೆಗೈದ ಹಿಂದೂ ಮಹಾಸಭಾವು ಅದನ್ನು ಬಹಿರಂಗವಾಗಿ ಒಪ್ಪಿಕೊಂಡು ಸವಾಲೆಸೆದು ರಾಷ್ಟ್ರೀಯ ಬಾವೈಕ್ಯತೆಗೆ ದಕ್ಕೆ ತಂದ ಇದರ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ಶರೀಫ್ ಕಟ್ಟತ್ತಾರು, ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಉಪಾಧ್ಯಕ್ಷ ಹಮೀದ್ ಸಾಲ್ಮರ, ಸಮಿತಿ ಸದಸ್ಯ ಮೊಹಮ್ಮದ್ ಪಿ ಬಿ ಕೆ, ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಒಳಮೊಗರು ಗ್ರಾಮ ಸಮಿತಿ ಸದಸ್ಯ ಸಿರಾಜ್ ಪರ್ಪುಂಜ, ಬ್ಲಾಕ್ ಕಾರ್ಯದರ್ಶಿ ಅಶ್ರಫ್ ನರಿಮೊಗರು,ಮುಖಂಡರಾದ ಶಾಕಿರ್ ಕಟ್ಟತ್ತಾರ್ ಹಾಗು ಸ್ಥಳೀಯ ಮುಖಂಡರಾದ ಹನೀಫ್ ಪಿ ಎಂ, ಅಶ್ರಫ್ ಪಿ ಬಿ, ರಫೀಕ್ ನಂಜೆ,ಸವಾದ್ ರೆಂಜ,ಉಮರ್ ಕೆಯ್ಯುರು, ಎಸ್ ಎಂ ಮೊಹಮ್ಮದ್ ಕುಂಬ್ರ ಹಾಗು ವಿವಿಧ ಗ್ರಾಮ ಸಮಿತಿ ಹಾಗು ಬೂತ್ ಸಮಿತಿ ಮುಖಂಡರು, ಕಾರ್ಯಕರ್ತರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು ಇಸಾಕ್ ಜಾರಾತ್ತರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.