';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹಗರಿಬೊಮ್ಮನಹಳ್ಳಿ: ವಿವಾಹಿತೆಯೊಂದಿಗೆ ಸೆಲ್ಫಿ ತೆಗೆದು ಕೊಂಡಿದ್ದ ಯುವಕನು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಹಿನ್ನೆಲೆಯಲ್ಲಿ ಮಹಿಳೆ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಹಿರೇ ಸೊಬಟಿ ಗ್ರಾಮದ ರುದ್ರಪ್ಪ ಅವರ ಪುತ್ರಿ ಶೀಲಮ್ಮ ಯಾನೆ ಲಲಿತಾ (24) ಮೃತಪಟ್ಟವರು. ಹಿರೇ ಸೊಬಟಿ ಗ್ರಾಮದ ಗೊರವಪ್ಪನವರ ನೀಲಪ್ಪ ಎನ್ನುವ ಯುವಕ ಬುಧವಾರ ಸೊನ್ನ ಗ್ರಾಮಕ್ಕೆ ತೆರಳಿ ಕೃಷಿಭೂಮಿಯಲ್ಲಿ ಮಹಿಳೆಯೊಂದಿಗೆ ಸೆಲ್ಫಿ ತೆಗೆಸಿ ಕೊಂಡು ಮಹಿಳೆಯ ತವರು ಮನೆಯವರ ವಾಟ್ಸ್‌ಆ್ಯಪ್ ಸಹಿತ ಇತರರಿಗೆ ಕಳುಹಿಸಿದ್ದಾನೆ.
ವಿಷಯ ತಿಳಿದ ಮಹಿಳೆಯ ತಂದೆ, ಮಗಳನ್ನು ವಿಚಾರಿಸಿದ್ದು, ಬಳಿಕ ಆತಂಕ ಹಾಗೂ ಅವಮಾನದಿಂದ ಲಲಿತಾ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.