ನ್ಯಾಯಲಯದಲ್ಲೇ ಭೂಗತ ಪಾತಕಿ ಮೇಲೆ ಗುಂಡಿನ ದಾಳಿ; ಟಿಲ್ಲು ಗ್ಯಾಂಗ್ನ ಇಬ್ಬರು ಸದಸ್ಯರು, ರೌಡಿ ಶೀಟರ್ ಗಳ ಬರ್ಬರ ಹತ್ಯೆ
ನವದೆಹಲಿ: ರೋಹಿಣಿ ಜಿಲ್ಲಾ ನ್ಯಾಯಲಯದ ಒಳಗೆ ಗುಂಡಿನ ದಾಳಿಯಾಗಿದ್ದು ಕುಖ್ಯಾತ ರೌಡಿ ಜಿತೇಂದ್ರ ಗೋಗಿಯನ್ನು ಹತ್ಯೆ ಮಾಡಲಾಗಿದೆ. ಟಿಲ್ಲು ಗ್ಯಾಂಗ್ ಸದಸ್ಯರಿಂದ ಈ ದಾಳಿ ನಡೆದಿದ್ದು, ಹಳೆ ದ್ವೇಷದ ಹಿನ್ನಲೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಲ್ಲು ಗ್ಯಾಂಗ್ ಇಬ್ಬರು ಸದಸ್ಯರಾದ ರಾಹುಲ್ ಮತ್ತು ಮೋರೀಸ್, ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿ ಹತ್ಯೆಯಾಗಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.
ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿಯಲ್ಲಿ ಜಿತೇಂದ್ರ ಗೋಗಿಯನ್ನು ಬಂಧಿಸಿದ್ದ ದೆಹಲಿ ಪೊಲೀಸ್ ವಿಶೇಷ ಸೆಲ್ ಇಂದು ವಿಚಾರಣೆಗಾಗಿ ರೋಹಿಣಿ ಜಿಲ್ಲಾ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ವಕೀಲರ ವೇಷದಲ್ಲಿ ಕೋರ್ಟ್ ಹಾಲ್ ಗೆ ಬಂದಿದ್ದ ಇಬ್ಬರು ಟಿಲ್ಲು ಗ್ಯಾಂಗ್ ಸದಸ್ಯರು ದಾಳಿ ನಡೆಸಿದ್ದಾರೆ.
https://twitter.com/ANI/status/1441341126741413889?
ಘಟನೆಯಲ್ಲಿ ಜಿತೇಂದ್ರ ಗೋಗಿ ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ದಾಳಿ ಮಾಡಿದ್ದ ಇಬ್ಬರು ರೌಡಿಗಳು ಒಳಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಕೋರ್ಟ್ ನಲ್ಲಿ ಗುಂಡಿನ ದಾಳಿ ನಡೆಸಿದ ಹಿನ್ನಲೆ ಪ್ರತಿ ದಾಳಿ ನಡೆಸಿ ಅವರನ್ನು ಹೊಡೆದು ಹಾಕಿದೆ ಎಂದು ಹೇಳಿದ್ದಾರೆ.
ಕೋರ್ಟ್ ಒಳಗೆ ನಡೆದ ಈ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ. ನ್ಯಾಯಲಯದ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಭದ್ರತೆಯನ್ನು ಪ್ರಶ್ನೆ ಮಾಡುತ್ತಿದ್ದು, ಭದ್ರತಾ ವೈಫಲ್ಯದ ಕಾರಣದಿಂದಾಗಿ ರೌಡಿಗಳು ವಕೀಲರ ವೇಷ ಧರಿಸಿ ಗನ್ ಗಳೊಂದಿಗೆ ಕೋರ್ಟ್ ಪ್ರವೇಶ ಮಾಡಲು ಸಾಧ್ಯವಾಗಿದೆ ಎಂದು ಆರೋಪಿಸಲಾಗುತ್ತಿದೆ.
ಹತ್ಯೆಯಾಗಿರುವ ಜಿತೇಂದ್ರ ಗೋಗಿ ದೆಹಲಿ ಭೂಗತ ಪಾತಕಿಯಾಗಿದ್ದು ಏಪ್ರಿಲ್‍ನಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ (MCOCA) ಅಡಿಯಲ್ಲಿ ದೆಹಲಿ ಪೊಲೀಸ್ ಪೊಲೀಸ್ ವಿಶೇಷ ಸೆಲ್ ಬಂಧಿಸಿತು. MCOCA ಪ್ರಸ್ತಾವನೆಯು 19 ಸುಲಿಗೆಗಳು, ದರೋಡೆಗಳು, ಕಾರುಗಳ್ಳತನ ಮತ್ತು ದರೋಡೆಗಳ ಜೊತೆಗೆ ಕೊಲೆ ಮತ್ತು ಕೊಲೆ ಯತ್ನದ 19 ಪ್ರಕರಣಗಳನ್ನು ಒಳಗೊಂಡಿವೆ.
2010 ರಲ್ಲಿ ತನ್ನ ತಂದೆಯ ಮರಣದ ನಂತರ ಶಾಲೆಯನ್ನು ಬಿಟ್ಟ ಗೋಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಲು ಆರಂಭಿಸಿದ, ಸದ್ಯ 30 ವರ್ಷದ ಈ ಗೋಗಿ ರಿಯಲ್ ಎಸ್ಟೇಟ್, ಆಸ್ತಿಯಲ್ಲಿ ವ್ಯಾಪಾರ ವ್ಯವಹರಿಸಲು ಆರಂಭಿಸಿದ್ದನು.
ಸೆಪ್ಟೆಂಬರ್ 2010 ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗೋಗಿ ಗುಂಡು ಹಾರಿಸಿದ್ದ, ದೆಹಲಿ ವಿಶ್ವವಿದ್ಯಾನಿಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆಗಳಲ್ಲಿ, ಗೋಗಿ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿ ಸಂದೀಪ್ ಮತ್ತು ರವೀಂದರ್ ಎಂಬ ಇಬ್ಬರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದರು. ಇದಾದ ಬಳಿಮ ಬಳಿಕ ಗೋಗಿ ಒಂದು ಟೀಂ ಕಟ್ಟಿಕೊಂಡು ಗ್ಯಾಂಗಸ್ಟಾರ್ ಆಗಿ ಬದಲಾಗಿದ್ದನು.