ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 35 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ತಂಡದ ಎದುರು 6 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಬೆಂಗಳೂರು ನೀಡಿದ 157 ರನ್ ಗುರಿ ಬೆನ್ನಟ್ಟಿದ ಚೆನ್ನೈ 18.1 ಓವರ್’ಗಳಲ್ಲಿ ಗೆದ್ದು ಬೀಗಿತು.
ಇದರೊಂದಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (53) ಹಾಗೂ ದೇವದತ್ತ ಪಡಿಕ್ಕಲ್ (70) ಪಡಿಕ್ಕಲ್ ಹೋರಾಟವು ವ್ಯರ್ಥವೆನಿಸಿತು
ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ 111 ರನ್’ಗಳ ಜೊತೆಯಾಟದೊಂದಿಗೆ ಆರಂಭದಲ್ಲೇ ಭರ್ಜರಿ ಆಟ ಆಡಿದರು. ಆದರೆ ಕೊನೆಯ 7 ಓವರ್‌ಗಳಲ್ಲಿ, ಸಿಎಸ್‌ಕೆ ಬೌಲರ್‌ಗಳು ಅದ್ಭುತವಾದ ಪುನರಾಗಮನ ಮಾಡಿದರು ಮತ್ತು ಆರ್‌ಸಿಬಿಯ ರನ್ ಗಳಿಸುವಿಕೆಗೆ ಕಡಿವಾಣ ಹಾಕಿದರು. ಡ್ವೇನ್ ಬ್ರಾವೊ ಮತ್ತು ಶಾರ್ದೂಲ್ ಠಾಕೂರ್ ಅವರ ಅತ್ಯುತ್ತಮ ಬೌಲಿಂಗ್ ಮುಂದೆ, ಆರ್ಸಿಬಿ ಕೇವಲ 156 ರನ್ ಗಳಿಸಲು ಸಾಧ್ಯವಾಯಿತು. ಗುರಿ ಬೆನ್ನತ್ತಿದ ಚೆನ್ನೈ ಇನ್ನು 11 ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಫೀಲ್ಡಿಂಗ್‌ನಲ್ಲಿ ಮಿಂಚಿದ ಕೊಹ್ಲಿ:
Captain can fly, ft. @imVkohli! 👏 👏
— IndianPremierLeague (@IPL) September 24, 2021
The @RCBTweets skipper dived forward, kept his eyes on the ball & took a sensational catch to dismiss Ruturaj Gaikwad. 👌 👌 #VIVOIPL #RCBvCSK
Watch that catch 🎥 ⬇️https://t.co/pfQId28dmp