dtvkannada

ಬೆಂಗಳೂರು: ಇತ್ತೀಚಿಗೆ ಟೋಯಿಂಗ್ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ವಿಭಾಗದ ಪೊಲೀಸರು ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ.

ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು. ಓರ್ವ ASI ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು. ವಾಹನಗಳ ಟೋಯಿಂಗ್ಗೂ ಮುನ್ನ ಅನೌನ್ಸ್ ಮಾಡಬೇಕು. ವಾಹನದ ನಾಲ್ಕು ಭಾಗಗಳಿಂದ ಫೋಟೋ ತೆಗೆದುಕೊಳ್ಳಬೇಕು. ಬಳಿಕ ವಾಹನವನ್ನ ಟೋಯಿಂಗ್ ಮಾಡಬೇಕು. ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು. ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು.

ಅದೇ ರೀತಿ ಟೋಯಿಂಗ್ ಮಾಡಿದ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು. ಈ ನಿಯಮಗಳನ್ನ ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದುವರೆಗೂ ನಿಯಮಗಳನ್ನ ಪಾಲಿಸದ ಐವರು ಟೋಯಿಂಗ್ ಸಿಬ್ಬಂದಿಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗ ಮಾಹಿತಿ ನೀಡಿದೆ.

By dtv

Leave a Reply

Your email address will not be published. Required fields are marked *

error: Content is protected !!