dtvkannada

ಬೆಂಗಳೂರು: ಲಕ್ಕಸಂದ್ರ ಬಳಿ ಮೂರು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ನೆಲಕ್ಕೆ ಉರುಳಿದೆ. ಮನೆ ಕುಸಿದು ಬೀಳುವ ದೃಶ್ಯ ಭೀಕರವಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ.

ಕಟ್ಟಡದಲ್ಲಿ 20 ಕ್ಕೂ ಅಧಿಕ ಮಂದಿ ವಾಪಸವಿದ್ದರು. ಕುಸಿದ ಕಟ್ಟಡ ಹಳೆಯದಾಗಿದೆ. ಶಾಸಕ ರಾಮಲಿಂಗಾರೆಡ್ಡಿ ಮನೆಯಿಂದ ಕೊಂಚ ದೂರದಲ್ಲಿರುವ ಕಟ್ಟಡ ಎಂದು ತಿಳಿದುಬಂದಿದೆ. ಹಳೇ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ಕಟ್ಟಡ ಕುಸಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮುನ್ನ ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ತೆರವುಗೊಳಿಸಿತ್ತು. 1974ರಲ್ಲಿ ಮೂರು ಅಂತಸ್ತಿನ ಮನೆ ನಿರ್ಮಾಣವಾಗಿತ್ತು. ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ನಲ್ಲಿರುವ ಮನೆ ಕುಸಿದಿದ್ದು, ಸುರೇಶ್ ಎಂಬುವವರಿಗೆ ಕಟ್ಟಡ ಸೇರಿದೆ. ಕಟ್ಟಡದಲ್ಲಿ ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಸಿಬ್ಬಂದಿಗಳಿದ್ದರು. ಕಟ್ಟಡ ಕುಸಿದು ಬೀಳುವ ಮಾಹಿತಿ ಮೊದಲೇ ಇದ್ದ ಕಾರಣ ಕಾರ್ಮಿಕರು ಓಡಿ ಹೊರ ಬಂದಿದ್ದರು

By dtv

Leave a Reply

Your email address will not be published. Required fields are marked *

error: Content is protected !!