ಪುತ್ತೂರು: ಅಪ್ರಾಪ್ತೆ ಬಾಲಕಿಯೊಬ್ಬಳನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ವಿದ್ಯಾರ್ಥಿನಿಯೊರ್ವಳು ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊರ್ವ ಆಕೆಗೆ ಚಾಕಲೇಟ್ ಕೊಡಿಸುವ ಆಮಿಷವೊಡ್ಡಿ ಅಪಹರಣ ಮಾಡಲು ಯತ್ನಿಸಿದ್ದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಆ ಆಪ್ರಾಪ್ತ ಬಾಲಕಿಯ ಪೋಷಕರು ಶಾಲೆಗೆ ಹಾಗೂ ಪೊಲೀಸರಿಗೆ ಮೌಖಿಕವಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆಸೆ.23ರಂದು ಕುಂಜೂರುಪಂಜ ಶಾಲೆಯ ವಿದ್ಯಾರ್ಥಿನಿ ಮಧ್ಯಾಹ್ನ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಅಪರಿಚಿತ ಬೈಕ್ ಸವಾರ ಆಕೆಯ ಬಳಿ ಬೈಕ್ ನಿಲ್ಲಿಸಿ ನಿನಗೆ ಚಾಕಲೇಟ್ ಕೊಡಿಸುತ್ತೇನೆ. ನನ್ನೊಂದಿಗೆ ಬೈಕ್‌ನಲ್ಲಿ ಬಾ ಎಂದು ಕರೆದಿದ್ದಾನೆ ಎನ್ನಲಾಗಿದೆ.ಇದರಿಂದ ಭೀತಳಾದ ವಿದ್ಯಾರ್ಥಿನಿ ಅಲ್ಲಿಂದ ಓಡಿ ಸುರಕ್ಷಿತವಾಗಿ ಮನೆ ಸೇರಿದದ್ದಾಳೆ. ಬಳಿಕ ಘಟನೆ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ ಪೊಷಕರು ಈ ಕುರಿತು ಶಾಲೆಗೆ ಹಾಗೂ ಪೊಲೀಸರಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.