dtvkannada

ಪುತ್ತೂರು: ಸರ್ವ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟು ಮಾಡುತ್ತಾ, ಧಾರ್ಮಿಕ ಕೇಂದ್ರಗಳನ್ನು ಕೆಡವಲು ಸಂಚು ರೂಪಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ವತಿಯಿಂದ ಪಂಜಿನ ಆಗ್ರಹವು ಪುತ್ತೂರಿನ ವಿಧಾನಸೌದದ ಮುಂಬಾಗದ ಅಮರ್‌ ಜವಾನ ಮೈದಾನದಲ್ಲಿ ನಡೆಯಿತು.

ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುತ್ವ-ಶಾಸಕ-ಮಂತ್ರಿ ಇದರಲ್ಲಿ ಒಂದನ್ನು ಆಯ್ಕೆ ಮಾಡಲು ಹೇಳಿದರೆ ನನ್ನ ಆಯ್ಕೆ ಹಿಂದುತ್ವ ಎಂದು ಹೇಳುತ್ತಿದ್ದ ನಕಲಿ ಹಿಂದುತ್ವವಾದಿ ಸಚಿವರ ಹಿಂದುತ್ವವನ್ನು ಈಗ ಎಲ್ಲಿ ಅಡವಿಟ್ಟಿದ್ದೀರಿ? ಎಂದು ಸಚಿವ ಸುನಿಲ್‌ಕುಮಾರ್ ಹಾಗು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ನಂತರ ಮಾತನಾಡಿದ ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಮೋಸ ವಂಚನೆಯ ಮೂಲಕ ಅಧಿಕಾರಕ್ಕೆ ಬಂದು ಇದೀಗ ಜನರ ಧಾರ್ಮಿಕ ಭಾವನೆಯ ಮೇಲೆ ಸವಾರಿ ಮಾಡುತ್ತಾ, ಧರ್ಮಾಧಾರಿತವಾಗಿ ರಾಜಕೀಯ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಈ ರಾಜ್ಯವನ್ನು ಆಳುವ ನೈತಿಕತೆ ಇಲ್ಲ‌ ಎಂದು ವಾಗ್ದಾಳಿ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ್ ರೈ ಮಾತನಾಡಿ, ರಾಮನ ನಾಮ ಜಪಿಸುತ್ತಾ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಡೋಂಗಿ ಹಿಂದುತ್ವದ ಬಿಜೆಪಿ ಸರ್ಕಾರ ಇದೀಗ ಹಿಂದುಗಳ ಭಾವನೆಯನ್ನೇ ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಂತರ ಮಾತನಾಡಿದ ಸೂತ್ರಬೆಟ್ಟು ಜಗನ್ನಾಥ ರೈ, ಸುಮಾರು ಇನ್ನೂರು ವರ್ಷಗಳ ಹಿಂದಿನ ದೇವಸ್ಥಾನಗಳನ್ನು ಕೆಡವಿ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ
ಅನಿತಾ ಹೇಮನಾಥ ಶೆಟಿ, ವಾಣಿ ಶ್ರೀಧರ, ರೇಖಾ ಯಶೋಧರ, ಅನ್ವರ್ ಖಾಸಿಂ, ಇಸ್ಮಾಯಿಲ್ ಸಾಲ್ಮರ, ಬಿ ಎ ರಹಿಮಾನ್, ಮುಖೇಶ್, ವೇಣುಗೋಪಾಲ್ ಮಣಿಯಾಣಿ, ನಗರ ಸಭೆ ಸದಸ್ಯರಾದ ರಾಬಿನ್ ತಾವ್ರೋ, ನಗರ ಸಭೆ ಸದಸ್ಯರಾದ ರಿಯಾಝ್ ಪರ್ಲಡ್ಕ, ಕಿಟ್ಟಣ್ಣ ಗೌಡ್ರು, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಅಬೂಬಕರ್ ಮುಲಾರ್, ಬ್ಲಾಕ್ ಮುಂಚೂಣಿ ಘಟಕದ ಶರೂನ್ ಸಿಕ್ವೇರ, ಕೇಶವ್ ಪಡೀಲ್, ಮಹಾಲಿಂಗ ನಾಯ್ಕ, ಹರೀಶ್ ನಿಡ್ಪಳ್ಳಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಇಕ್ಬಾಲ್ ಪೆರಿಗೇರಿ, ನಾಯಕರಾದ ದಿವ್ಯನಾಥ್ ಶೆಟ್ಟಿ, ಶಿವರಾಮ ಆಳ್ವ, ರವೀಂದ್ರ ನೆಕ್ಕಿಲು, ಬಶೀರ್ ಪರ್ಲಡ್ಕ, ಯೂಸುಫ್ ತಾರಿಗುಡ್ಡೆ, ರವೂಫ್ ಸಾಲ್ಮರ, ಯು.ಟಿ.ತೌಸಿಫ್, ಇಸ್ಮಾಯಿಲ್ ಬಲ್ನಾಡ್, ಇಬ್ರಾಹಿಂ ನೆಕ್ಕರೆ, ರೋಶನ್ ರೈ ಬನ್ನೂರು, ಶೇಖರ್ ಪಡೀಲ್, ಡಿ.ಕೆ ರಹಿಮಾನ್ ಕೂರ್ನಡ್ಕ, ಮಹೇಶ್ಚಂದ್ರ ಸಾಲ್ಯಾನ್, ನೇಮಾಕ್ಷ ಸುವರ್ಣ, ನವೀನ್ ರೈ ಚೆಲ್ಯಡ್ಕ, ಅಭಿಷೇಕ್ ಆಚಾರ್ಯ, ರಂಜೀತ್ ಬಂಗೇರ, ಪ್ರಕಾಶ್ ಪುರುಷರಕಟ್ಟೆ, ಅಶೋಕ್ ಬೊಳ್ಳಾಡಿ, ನಾಗೇಶ್ ಆಚಾರ್ಯ, ಮೋನು ಬಪ್ಪಳಿಗೆ, ರಕ್ಷಿತ್ ಮೊಗೆರು, ಗಂಗಾಧರ್ ಶೆಟ್ಟಿ, ಸನದ್ ಯೂಸುಫ್, ಮೌರೀಶ್ ಮಸ್ಕರೇನಸ್, ಇಸಾಕ್ ಸಾಲ್ಮರ, ಹಂಝತ್ ಸಾಲ್ಮರ, ಇಸ್ಮಾಯಿಲ್ ಬೊಳ್ವಾರ್, ಗಣೇಶ್ ಶೆಟ್ಟಿ, ಜಗದೀಶ್ ಕಜೆ, ಶಶಿಕಿರಣ್ ರೈ, ಭಾಸ್ಕರ ಕರ್ಕೇರ, ಮೂಸೆ ಕಬಕ, ರೋಶನ್ ಡಯಾಸ್, ಸಂಶುದ್ದೀನ್ ಅಜ್ಜಿನಡ್ಕ, ರಶೀದ್ ಮುರ, ದಾಮೋದರ್ ಭಂಡಾರ್ಕರ್, ಸನದ್ ಯೂಸ್ಫ್, ಲೋಕೇಶ್ ಪೆಲತ್ತಡಿ, ಅಶೋಕ್ ಸಂಪ್ಯ, ಸಲಾಂ ಸಂಪ್ಯ, ಸಲೀಂ ಪಾಪು, ಸಯ್ಯದ್ ಕಬಕ, ನವೀನ್ ಬೊಳ್ವಾರ್, ಅಶ್ರಫ್ ಸವಣೂರು, ಸದಾನಂದ ಭರಣ್ಯ, ಶ್ರೀನಿವಾಸ್ ಭರಣ್ಯ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನವಾಝ್ ಬಲ್ನಾಡ್, ವಿ.ಕೆ ಶರೀಫ್, ಝುಬೈರ್ ಬಲ್ನಾಡ್, ಸೂಫಿ ಬಪ್ಪಳಿಗೆ, ಖಲಂದರ್ ಮಣ್ಣಾಪು, ಹಂಝತ್ ಬಪ್ಪಳಿಗೆ, ಮುಸ್ತಫ ಉಪ್ಪಿನಂಗಡಿ, ಸಾಧಿಕ್ ಉಪ್ಪಿನಂಗಡಿ, ಝುಬೈರ್ ಉಪ್ಪಿನಂಗಡಿ, ದಾಮೋದರ್ ಮುರ, ಖಾದರ್ ಕಲ್ಲರ್ಪೆ, ಖಾದರ್ ಪಾಟ್ರಕೋಡಿ, ಅಶೋಕ್ ಸಂಪ್ಯ, ಗಣೇಶ್ ಶೆಟ್ಟಿ,ಅಝಿಝ್ ಕೆಮ್ಮಯಿ, ಅಶಿಕ್ ಸ್ಕೇಲ್, ಅಝ್ರತ್ ಬಪ್ಪಳಿಗೆ, ವಾಲ್ಟರ್ ಡಿ ಸಿದ್ಯಾಳ, ಕೊರಗಪ್ಪ ಗೌಡ್ರು, ಅಲಿ ಪರ್ಲಡ್ಕ, ಸಲಾಂ ಕುಂಬ್ರ, ದಿನೇಶ್ ಪಾಣಾಜೆ, ಕೃಷ್ಣ ನಾಯ್ಕ, ರವಿಪ್ರಸಾದ್ ಶೆಟ್ಟಿ, ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ಅಝೀಝ್ ಉಜಿರೋಡಿ, ಅಝೀಝ್ ನೆರಿಗೆರಿ, ರಾಘವೇಂದ್ರ ಪುರುಷರಕಟ್ಟೆ, ತವೀದ್ ಸಾಲ್ಮರ, ಪ್ರೇಮ್ ಚೆಲ್ಯಡ್ಕ, ರಾಜು ಹೊಸ್ಮಟ, ಹರೀಶ್ ಬೆಟ್ಟಂಪಾಡಿ, ಸತ್ತಾರ್ ಜನತಾ, ಶರೀಫ್ ಕೆರೆಮೂಲೆ, ವಿಕ್ಟರ್ ಪಾಯಸ್, ಶಾಂತಪ್ಪ ನರಿಮೊಗರು, ಆನಂದ ಕೌಡಿಚ್ಚಾರ್, ಮೊಹಮ್ಮದ್ ಬೀಟಿಕೆ, ಸುಮಿತ್ರ, ಚಂದ್ರ ಕರೆಕ್ಕಾಡು, ಅಸ್ಗರ್ ಕೆರೆಮೂಲೆ,
ಹಾಗೂ ಅನೇಕ ಕಾರ್ಯಕರ್ತರು ಸರಕಾರದ ವಿರದ್ಧ ದಿಕ್ಕಾರ ಕೂಗಿದರು… ಯುವಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.. ಹನೀಫ್ ಪುಂಚತ್ತಾರ್ ಸ್ವಾಗತಿಸಿ ಕಮಲೇಶ್ ಸರ್ವದೋಳಗುತ್ತು ವಂದಿಸಿದರು.. ಸಿದ್ದಿಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು..

By dtv

Leave a Reply

Your email address will not be published. Required fields are marked *

error: Content is protected !!