ಸುಳ್ಯ: ಕೆಲಸದಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥ ಯುವಕನೊಬ್ಬ ಯುವತಿಯನ್ನು ಹಿಂಬಾಲಿಸಿ, ಅತ್ಯಾಚಾರವೆಸಗಲು ಯತೇನಿಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಾಜೆಯ ಜೋಗಿಬೆಟ್ಟುವಿನಲ್ಲಿ ನಡೆದಿದೆ.
22 ವರ್ಷದ ಯುವತಿ ಕೆಲಸ ಮುಗಿಸಿ ಮನೆಗೆ ಬಸ್ ನಲ್ಲಿ ತೆರಳುತ್ತಿದ್ದಾಗ ಅದೇ ಬಸ್ ನಲ್ಲಿ ಬಂದ ಆರೋಪಿ ಗಣೇಶ ಎಂಬಾತನು, ಆಕೆಯನ್ನು ಹಿಂಬಾಲಿಸಿ ಇಂದ್ರಾಜೆಯಿಂದ ಜೋಗಿಬೆಟ್ಟು ಕಡೆಯ ರಸ್ತೆಯಲ್ಲಿ ಒಬ್ಬಳೇ ಹೋಗುತ್ತಿದ್ದಾಗ ಆಕೆಯ ಮೇಲೆ ಕೈ ಹಾಕಿ ದೌರ್ಜನ್ಯವೆಸಗಿದ್ದಾನೆ . ಗಾಬರಿಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಆರೋಪಿ ಗಣೇಶನು ಈ ವಿಚಾರ ಯಾರಲ್ಲಿಯಾದರೂ ಹೇಳಿದರೆ ಮುಂದಿನ ದಿನಗಳಲ್ಲಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ , ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ . 46/2021 ಕಲಂ : 354 ( D ) , 354 ( A ) , 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಂಗ ಬಂಧನದಲ್ಲಿರಿಸಿದ್ದಾರೆ.