ಮಂಗಳೂರು: ದೇವಸ್ಥಾನಗಳನ್ನು ಕೆಡವಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ರಾಜ್ಯ ಸರಕಾರದ ವಿರುದ್ಧ ಶ್ರೀ ರಾಮ ಸೇನೆ ಮುಖಂಡರು ಪತ್ರಿಕಾಗೋಷ್ಠಿಯ ಮುಖಾಂತರ ಆಕ್ರೋಶ ಹೊರಹಾಕಿದರು.
ಸುಮಾರು 21 ವರ್ಷಗಳ ಹಿಂದೆ ಶಬ್ದ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ರಾತ್ರಿ 10 ರ ನಂತರ ಬೆಳಿಗ್ಗೆ 5ರವರೆಗೆ ಯಾವುದೇ ಶಬ್ದ ಮಾಲಿನ್ಯ ಮಾಡಬಾರದೆಂದು ಆದೇಶ ನೀಡಿತ್ತು. ಆದರೆ ಅದನ್ನು ಪಾಲಿಸದೇ ದೇವಾಲಯ ನೆಲಸಮದ ಆದೇಶ ಪಾಲಿಸಿರುವುದು ನಿಮ್ಮ ದ್ವಂದ ನೀತಿ ಅಲ್ಲವೇ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ತಿಳಿಸಿದ್ದಾರೆ.
ರಾಜ್ಯ ಸರಕಾರ ದೇವಸ್ಥಾನ ನೆಲಸಮ ಮಾಡಿ ಬಹಳ ದೊಡ್ಡ ರಾದ್ದಾಂತಕ್ಕೆ ಕೈ ಹಾಕಿತು. ನಂತರ ಡಿಸಿ, ತಹಶೀಲ್ದಾರ್ ಮೇಲೆ ಗೂಬೆ ಕೂರಿಸಿದರು. ಇಷ್ಟಕ್ಕೆಲ್ಲಾ ಅವರು ನೀಡಿದ ಕಾರಣ ಸುಪ್ರೀಂ ಕೋರ್ಟ್ ಆದೇಶ. ಆದ್ದರಿಂದ 21 ವರ್ಷ ಹಳೆಯದಾದ ಆದೇಶವನ್ನು ಸಹ ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಅ.7ರಂದು ಶ್ರೀರಾಮ ಸೇನೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.