';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಡಬ: ರೇಬಿಸ್ ವೈರಸ್ ಗೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಬಲಿಯಾದ ಘಟನೆ ಕಡಬದಲ್ಲಿ ನಡೆದಿದೆ.ಕಡಬ ಅಲಂಕಾರು ನಿವಾಸಿ ವರ್ಗಿಸ್ ರವರ ಪುತ್ರಿ ವಿನ್ಸಿ ಸಾರಮ್ಮ(17) ಎಂದು ಗುರುತಿಸಲಾಗಿದೆ.
ನಗರದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನ್ಸಿ ಸಾರಮ್ಮ ರವರ ಸಹಿತ ಇಬ್ಬರ ಮೇಲೆ ಅಲಂಕಾರು ಬದಿಯಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು.ಮೊನ್ನೆ ಇದ್ದಕ್ಕಿದ್ದಂತೆ ಶುರುವಾದ ತಲೆನೋವು ಉಲ್ಬಣಗೊಂಡಾಗಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡೊಯ್ಯಲಾಯಿತು, ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದು, ಪುತ್ತೂರುವಿನಿಂದ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ತಡ ರಾತ್ರಿ ಮೃತಪಟ್ಟಿದ್ದಾರೆ.ತಿಂಗಳುಗಳ ಹಿಂದೆ ಅವರ ಮನೆಯ ನಾಯಿಯೂ ಸತ್ತಿದ್ದು ಆ ನಾಯಿಯಲ್ಲಿ ರೇಬಿಸ್ ವೈರಸ್ ಪತ್ತೆಯಾಗಿತ್ತು.