ಬೆಂಗಳೂರು: ‘ಮಂಗಳೂರಿನ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ ಮತ್ತು ಅವರ ಕುಟುಂಬದವರಿಗೆ ಹಲ್ಲೆಯ ಬೆದರಿಕೆಯೊಡ್ಡಿರುವುದು ಖಂಡನೀಯ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಂಘ ಪರಿವಾರಕ್ಕೆ ಸೇರಿದವನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದಾರೆ.
ಮಂಗಳೂರಿನ ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ @LavanyaBallal ಮತ್ತು ಅವರ ಕುಟುಂಬದವರಿಗೆ ಹಲ್ಲೆಯ ಬೆದರಿಕೆಯೊಡ್ಡಿರುವುದು ಖಂಡನೀಯ. @compolmlr ಅವರು ತಕ್ಷಣ ಸಂಘ ಪರಿವಾರಕ್ಕೆ ಸೇರಿದವನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು. pic.twitter.com/7RIH0Gd1if
— Siddaramaiah (@siddaramaiah) October 2, 2021
ಸೆ.30 ರಂದು ಖಾಸಗಿ ವಾಹಿನಿಯಲ್ಲಿ ನಡೆದ ‘ದಾದಾಗಿರಿ’ ಎಂಬ ನೇರಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲಿ ಸಂದೀಪ್ ಎಂಬ ಹೆಸರಿನ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕಿಯಾದ ಲಾವಣ್ಯ ಬಲ್ಲಾಳ್ ಅವರಿಗೆ ಹೊಡೆಯುತ್ತೇನೆ ಎಂದು ಆವಾಜ್ ಹಾಕಿದ್ದರು.