dtvkannada

ಉಪ್ಪಿನಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಸಭಾವನದಲ್ಲಿ 75 ನೇ ಭಾತರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ವಾರಗಳ ನಿರಂತರ ಕಾರ್ಯಕ್ರಮ ನಡೆಯುತ್ತಿದ್ದು, ಅದರ ಒಂದು ಅಂಗವಾಗಿ ಇವತ್ತು ತೆಕ್ಕಾರು ಗ್ರಾಮ ಪಂಚಾಯತ್ ಸಭಾವನದಲ್ಲಿ ಮಹತ್ಮಾ ಗಾಂಧೀಜಿಯವರ ಜಯಂತಿ ಯನ್ನು ಮತ್ತು ಸರಕಾರದ ಅದೇಶದನ್ವಯ ಆಜಾದಿ ಕಾ ಅಮೃತ ಮಹೋತ್ಸವ ಎನ್ನುವ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಗಳನ್ನು ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ ಅಬ್ದುಲ್ ರಝಾಕ್ ಇವರು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಜಿ ಹೆಚ್ ಸುಮಯ್ಯ ವಿವಿಧ ಕಾರ್ಯಕ್ರಮಕ್ಕೆ ಅನುಗುಣವಾಗಿ ಮಾಹಿತಿಯನ್ನು ನೀಡಿದರು.

ಇದೇ ವೇದಿಕೆಯಲ್ಲಿ ತೆಕ್ಕಾರು ಗ್ರಾಮಾದಾದ್ಯಂತ ನಡೆದ ಕೋವಿಡ್ ಲಸಿಕಾ ಕಾರ್ಯದಲ್ಲಿ ಪಂಚಾಯತ್ ನೊಂದಿಗೆ ಸಹಕರಿಸಿದ ಶ್ರೀ ಉಮ್ಮರುಲ್ ಫಾರೂಕ್ ಇವರನ್ನು ಅಭಿನಂದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು , ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧಿಕಾರಿ ಸ್ವಾಗತಿಸಿ ವಂದಿಸಿದರು.ಇದೇ ಕಾರ್ಯಕ್ರಮದಡಿಯಲ್ಲಿ ತೆಕ್ಕಾರು ಗ್ರಾಮದಲ್ಲಿ”ನಮ್ಮ ನಡೆ , ಸ್ವಚ್ಛತೆಯ ಕಡೆ” ಎನ್ನುವ ಘೋಷ ವಾಕ್ಯದೊಂದಿಗೆ ದಿನಾಂಕ: 05/10/2021 ರಂದು ಬೆಳಿಗ್ಗೆ 8:30ಯಿಂದ ಸ್ವಚ್ಚತಾ ಶ್ರಮದಾನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ತೆಕ್ಕಾರು ಗ್ರಾಮಸ್ಥರೆಲ್ಲರೂ ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಪಿ.ಡಿ.ಒ ವಿನಂತಿಸಿದರು.

By dtv

Leave a Reply

Your email address will not be published. Required fields are marked *

error: Content is protected !!