ಸುಳ್ಯ: ವೀ ಅರ್ ಒನ್ ವಾಟ್ಸಪ್ಪ್ ಗ್ರೂಪಿನ ಸಹಯೋಗದೊಂದಿಗೆ ಸಂಪಾಜೆ ಗ್ರಾಮ ಪಂಚಾಯತ್ ದ:ಕ,ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಷನ್ ಆಸ್ಪತ್ರೆ ಹಾಗು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಸಹಭಾಗಿತ್ವ ದೊಂದಿಗೆ ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ವಹಿಸಿಕೊಂಡರು ಸಂಪಾಜೆ ಗ್ರಾಮದ ಜನತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನಿಗಳ ಸಹಕಾರಕ್ಕೆ ಸ್ಲಾಘನೆ ವ್ಯಕ್ತಪಡಿಸಿದರು
ರಕ್ತದಾನ ಶಿಬಿರದ ರೂವಾರಿ ಸಿದ್ದಿಕ್ ಗೂನಡ್ಕರವರು ಸರ್ವರನ್ನು ಸ್ವಾಗತಿಸಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ನಮ್ಮನ್ನು ಸಂಪರ್ಕಿಸಿ ರಕ್ತದ ಅಭಾವ ಎದುರಿಸುತ್ತಿರುವ ವಿಚಾರಗಳನ್ನು ತಿಳಿಸಿದ ಸಂದರ್ಭ ನಮಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಿದ ವೀ ಅರ್ ಒನ್ ವಾಟ್ಸಪ್ಪ್ ಗ್ರೂಪಿನ ಸರ್ವರಿಗೂ ಗ್ರಾಮ ಪಂಚಾಯತ್ ಸಂಪಾಜೆ ತಂಡಕ್ಕೂ ಹಾಗು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ರವರಿಗೂ ಹೃದಯಾಳಾಂತರಲಾದ ಕೃತಜ್ಞತೆ ಸಲ್ಲಿಸಿದರು
ಪ್ರಾಸ್ತಾವಿಕ ಭಾಷಣ ಮಾಡಿದ ಕರೀಂ ಕೆಧ್ಕರ್ ಸಂಪಾಜೆ ಭಾಗದ ಯುವಕರ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಜ್ಜನ್ ಪ್ರತಿಷ್ಠಾನದ ಕಾರ್ಯದರ್ಶಿ ರಹೀಮ್ ಬೀಜದಕಟ್ಟೆ,ಪ್ರವೀಣ್ ಕುಮಾರ್ ,ಅಬುಶಾಲಿ ಗೂನಡ್ಕ ,ಶವಾದ್ ಗೂನಡ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀ ಆರ್ ಒನ್ ಗ್ರೂಪಿನ ಸದಸ್ಯರಾದ ಅಜರುದ್ದೀನ್ ಗೂನಡ್ಕ,ಜಾಬಿರ್ ಗೂನಡ್ಕ,ಅರಿಸ್ ಕೆ ಎಸ್ ಹಾಗು ಹಿರಿಯರಾದ ಉಮ್ಮರ್ ಹಾಜಿ,ಅಬ್ಬಾಸ್ ಹಾಜಿ ಸಂಟ್ಯಾರ್,ಅಬ್ದುಲ್ಲ ಸಿ ಎಂ,ಶಿವಕುಮಾರ್ ಜಿ ಜಿ,ನವೀನ್ ಜಿ ಜಿ,ಸಲಿಂ ಪೇರಂಗೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ,ಎಸ್ ಕೆ ಹನೀಫ್,ವಿಮಲಾ ಪ್ರಸಾದ ಹಾಗು ರಿಯಾಜ್,ಉಬೈಸ್ ಪಿ ಯು,ಉನೈಸ್ ಪಿ ಯು,ಅಶ್ರಫ್,ಹಾಗು ಹಲವಾರು ರಕ್ತದಾನಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ರವರಿಂದ ಆರಂಭವಾದ ರಕ್ತದಾನ ಶಿಬಿರವು ಅಮೂಲ್ಯ 50 ಜೀವದಾನಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ವಿಶೇಷತೆಯಾಗಿ ಜಿ ಜಿ ನೀಲಮ್ಮ ಕುಟುಂಬದ ನಾಲ್ವರು ಹಾಗು ಸಫ್ವಾನ್ ಸಾಹಿಲ್ ಸಹೋದರರು ಹಾಗು 3 ಮಹಿಳೆಯರಿಂದ ರಕ್ತದಾನ ಮಾಡಲಾಯಿತು.
ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಸಂಘಟಕರಿಗೆ ಹಾಗು ಸಿಬ್ಬಂದಿಗಳಿಗೆ ಬೆಳಗ್ಗಿನ ಉಪಹಾರ ಮತ್ತು ಮದ್ಯಾಹ್ನ ಊಟವನ್ನು ಸಜ್ಜನ ಪ್ರತಿಷ್ಠಾನದ ವತಿಯಿಂದ ನೀಡಿ ಸಹಕರಿಸಲಾಯಿತು.