';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪಾಂಡವರಕಲ್ಲು: ನಿನ್ನೆ (2/10/21)ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಲವಾರು ಮರ ಹಾಗೂ ವಿಧ್ಯುತ್ ಕಂಬಗಳು ಬಿದ್ದು ಸುಮಾರು 30 ಕ್ಕಿಂತಲೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಹಾನಿಗೊಳಗಾದ ಮನೆಗಳ ದುರಸ್ಥಿ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ಪ್ರಾರಂಭಿಸಿಕೊಂಡಿದೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳೀಯ ನಾಯಕರು, ನಿನ್ನೆ ವಿಧ್ಯುತ್ ಸಂಪೂರ್ಣ ಸ್ಥಗಿತವಾಗಿದ್ದು ಕತ್ತಲಲ್ಲಿ ನೆರವು ಕಾರ್ಯ ಮಾಡಲು ಸಾಧ್ಯವಾಗದ ಕಾರಣ ಸಂತ್ರಸ್ತರನ್ನು ಬೇಟಿಯಾಗಿ ಸಾಂತ್ವನ ನೀಡಿ ದುರಸ್ಥಿ ಕಾರ್ಯದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಮುಂಜಾನೆಯೆ ಸ್ಥಳಕ್ಕೆ ಧಾವಿಸಿ ದುರಸ್ಥಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.