dtvkannada

ಬೆಳಗಾವಿ, ಅ.2: ಮಹಾತ್ಮ ಗಾಂಧೀ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆ ಪ್ರಯುಕ್ತವಾಗಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಕಣಬರಗಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಾದ ಗೌರಿಶಂಕರ ಬಿ. ಕಡೇಚೂರ, ನಮ್ಮ ಸುತ್ತ ಮುತ್ತಲಿನ ವಾತಾವರಣ ಕೂಡಿದಾಗ ಮಾತ್ರ ನಮ್ಮ ಆರೋಗ್ಯದೊಂದಿಗೆ ನಮ್ಮ ಆಂತರಿಕ ಬೆಳವಣಿಗೆ ಸಾಧ್ಯ. ಆದುದರಿಂದ ಸ್ವಚ್ಛತೆಯಿಂದ ಇರುವುದು ನಮ್ಮ ಆದ್ಯ ಕರ್ತವ್ಯವಾಗಲಿ ಎಂದು ಹೇಳಿದರು. ಗಾಂಧಿಯವರು ಸದಾಕಾಲ ಭಜಿಸುತ್ತಿದ್ದ “ರಘುಪತಿ ರಾಘವ ರಾಜಾರಾಮ್” ಭಜನೆಯನ್ನು ಭಕ್ತಿಪೂರ್ವಕವಾಗಿ ಭಜಿಸಿದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಸತಿ ನಿಲಯವು ನಮ್ಮ ಮನೆಯಂತೆ ಆದ್ದರಿಂದ ನಾವು ನಮ್ಮ ವಸತಿ ನಿಲಯವನ್ನು ಹದಿನೈದು ದಿನಕೊಂದು ಬಾರಿ ಸುತ್ತ ಮುತ್ತ ಮತ್ತು ನಮ್ಮ ಕೋಣೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪಣತೊಡೋಣ. ಇದರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ ಮತ್ತು ವಾತಾವರಣ ಸೌಂದರ್ಯೀಕರಣ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕು ಕಲ್ಯಾಣಾಧಿಕಾರಿಗಳಾದ ವಾಯ್. ಬಿ. ನಂದಿಯವರು ಮಾತನಾಡಿ, ನಿಲಯದ ವಿದ್ಯಾರ್ಥಿಗಳು ಓದಿನೊಂದಿಗೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು. ಕಣಬರಗಿ ವಸತಿ ನಿಲಯದ ಮೇಲ್ವಿಚಾರಕರು, ಅಡುಗೆ ಸಹಾಯಕರು, ವಿದ್ಯಾರ್ಥಿಗಳು, ನಿಲಯದ ಉದ್ಯಾನವನ, ಶೌಚಾಲಯ, ಸ್ನಾನದ ಕೋಣೆ, ಅಡುಗೆ ಮನೆ, ಆಟದ ಮೈದಾನವನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ಸ್ವಚ್ಛಗೊಳಿಸಿ ಶ್ರಮದಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By dtv

Leave a Reply

Your email address will not be published. Required fields are marked *

error: Content is protected !!