dtvkannada

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಕ್ವಾಲಿಟಿ ಫರ್ನಿಚರ್ & ಕ್ವಾಲಿಟಿ ಮಟನ್ ಮಾರ್ಕೆಟ್ ಮಾಲಕ ಮರ್ಹೂಂ ರಶೀದ್ ಖಾನ್ ಹಳೀರ ರವರ ಹೆಸರಿನಲ್ಲಿ ತಹ್ಲೀಲ್ ಮತ್ತು ದುಆ ಮಜ್ಲಿಸ್ ನಡೆಯಿತು. ಅಲ್ ಹಾಜ್ ಇಬ್ರಾಹಿಂ ಸಅದಿ ಮಾಣಿ ಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು ಮರಣದ ವಿಷಯದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಭಾಷಣ ಮಾಡಿದ ಇಬ್ರಾಹಿಂ ಸಅದಿ ಉಸ್ತಾದರು ಸಂಘಟನೆಯ ಅನಿವಾರ್ಯತೆ ಪರಲೋಕದ ಯಶಸ್ಸು ಕುರಿತು ವಿವರಿಸಿದರು. ಸಾಬಿತ್ ತಂಙಳ್ ಮುಈನಿ ಪಾಟ್ರಕೋಡಿ ದುಆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನಾಯಕರಾದ ಸ್ವಾದಿಕ್ ಮುಈನಿ ಸಖಾಫಿ ಗಡಿಯಾರ್, ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಕರೀಂ ನೆಲ್ಲಿ, ಎಸ್‌ವೈ‌ಎಸ್ ಜಿಲ್ಲಾ ಸದಸ್ಯರಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಉಸ್ತಾದ್ ಅಶ್ರಫ್ ಸಖಾಫಿ ಸೂರಿಕುಮೇರು, ಹಂಝ ಕಾಯರಡ್ಕ, ಎಸ್ಸೆಸ್ಸೆಫ್ ಅಧ್ಯಕ್ಷ ಮುಬಶ್ಶಿರ್ ಸೂರಿಕುಮೇರು, ಕಾರ್ಯದರ್ಶಿ ಇಮ್ರಾನ್ ಸೂರಿಕುಮೇರು,ಇಬ್ರಾಹಿಂ ಮುಸ್ಲಿಯಾರ್ ಹಳೀರ, ಅಬ್ದುಲ್ ಫತ್ತಾಹ್ ಮಾಣಿ, ಹಮೀದ್ ಡ್ರೈವರ್ ಮಾಣಿ ಮುಂತಾದವರು ಉಪಸ್ಥಿತರಿದ್ದರು, ಮುಈನ್ ಮಾಣಿ ಧನ್ಯವಾದಗೈದರು.

By dtv

Leave a Reply

Your email address will not be published. Required fields are marked *

error: Content is protected !!