';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಮಗನಿಗೇ ಆಕಸ್ಮಿಕವಾಗಿ ಬಿದ್ದು ಅವಾಂತರಕ್ಕೆ ಕಾರಣವಾದ ಘಟನೆ ನಗರದ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಇದರ ಮೋರ್ಗನ್ ಗೇಟ್ ಕಚೇರಿಯಲ್ಲಿ ಘಟನೆ ನಡೆದಿದೆ.
ಈ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಬಳಿ ಕೆಲಸದವರೊಬ್ಬರ ಜಟಾಪಟಿ ನಡೆದಿದೆ ಎನ್ನಲಾಗಿದೆ. ರಾಜೇಶ್ ಪ್ರಭು ಸಿಟ್ಟಿನಿಂದ ತನ್ನ ಪಿಸ್ತೂಲ್ ತೆಗೆದು ಗುಂಡು ಹಾರಿಸಿದ್ದು ಅದು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಕಚೇರಿ ಹೊರ ಭಾಗದಲ್ಲಿ ಘಟನೆ ನಡೆದಿದ್ದು ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸುಧೀಂದ್ರನ ಹಣೆಗೆ ಗುಂಡು ಬಿದ್ದಿದ್ದು ಗಾಯಗೊಂಡಿದ್ದಾನೆ.
ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಸಂಬಳ ಕೇಳಲು ಬಂದಿದ್ದ ಕೆಲಸದಾಳು ಅಪಾಯದಿಂದ ಪಾರಾಗಿದ್ದಾನೆ.