ಮಡಿಕೇರಿ: ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಎಎಸ್, ಐಪಿಎಸ್ ಅಧಿಕಾರಿಗಳಾಗುತ್ತಾರೆ ಎಂದು ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದರು.
ಮಡಿಕೇರಿಯಲ್ಲಿ ದಸರಾ ಹಾಗೂ ತಲಕಾವೇರಿ ತೀರ್ಥೋದ್ಭವ ಸಂಬಂಧ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್ ತರಬೇತಿ ಪಡೆದ 4000ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳಿದ್ದಾರೆ ಎಂಬ ಎಚ್‍ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
ಹಿಂದಿನಿಂದಲೂ ನಾವು ಅದನ್ನೇ ಹೇಳುತ್ತಿದ್ದೇವೆ. ಅವರು ಈಗ ಹೇಳುತ್ತಿದ್ದಾರೆ. ತಮ್ಮ ಮಕ್ಕಳನ್ನು ಸಂಘಕ್ಕೆ ಕಳುಹಿಸಿ ಐಪಿಎಸ್, ಐಎಎಸ್ ಅಧಿಕಾರಿಗಳಾಗುತ್ತಾರೆ ಎಂದರು. ಸಂಘದ ಶಿಕ್ಷಣ ಪಡೆದವರು ಬುದ್ಧಿವಂತರಿರುತ್ತಾರೆ. ಸೂಕ್ಷ್ಮ ಮತಿಗಳಾಗಿರುತ್ತಾರೆ ಹೀಗಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.ಸಂಘದ ಶಿಕ್ಷಣ ಪಡೆದವರು ಬುದ್ಧಿವಂತರಿರುತ್ತಾರೆ. ಸೂಕ್ಷ್ಮ ಮತಿಗಳಾಗಿರುತ್ತಾರೆ ಹೀಗಾಗಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಸಂಘ ಲಂಚಪಡೆಯೋದನ್ನು, ಜನರಿಗೆ ತೊಂದರೆ ಕೊಡೋದನ್ನು ಹೇಳಿಕೊಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ, ಹೆಚ್‍ಡಿಕೆ ಏನು ಹೇಳುತ್ತಾರೆ ಎಂಬುದರ ಮೇಲೆ ಸಂಘ ಕಟ್ಟಿಲ್ಲ. ಸಂಘ ರಾಷ್ಟ್ರ ಭಕ್ತಿಯನ್ನು ಹೇಳಿಕೊಡುತ್ತದೆ ಅದರ ಆಧಾರದಲ್ಲಿ ಸಂಘದ ಶಿಕ್ಷಣವಿದೆ ಎಂದು ಕುಟುಕಿದರು.