dtvkannada

ಮಂಗಳೂರು: ಇತ್ತೀಚೆಗೆ ಸುರತ್ಕಲ್ ನಲ್ಲಿ ಕೋಮುಪ್ರಚೋದನೆ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರ ವಿರುದ್ಧ ದೂರು ನೀಡಿದರೂ ಎಫ್‌ಐಆರ್‌ ದಾಖಲಾಗಿಲ್ಲ. ಎರಡು ದಿನಗಳ ಒಳಗಾಗಿ ಚೈತ್ರಾ ಮೇಲೆ ಸೂಕ್ತವಾದ ಎಫ್ಐಆರ್ ದಾಖಲಿಸದಿದ್ದಲ್ಲಿ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಸ್‌ಡಿಪಿಐ ಎಚ್ಚರಿಕೆ ನೀಡಿದೆ.

ಭಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲಿ ಕುಂದಾಪುರದ ಚೈತ್ರಾ ಎಂಬಾಕೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದು, ಮುಸ್ಲಿಂ ಮತ್ತು ಹಿಂದು ಸಮುದಾಯದಗಳ ನಡುವೆ ಐಕ್ಯತೆ ಮುರಿದು ಎರಡು ಸಮುದಾಯಗಳ ನಡುವೆ ಪರಸ್ಪರ ಕಚ್ಚಾಡುವ ಹಾಗೆ ಪ್ರೇರಣೆ ನೀಡಿದ್ದು, ಹಾಗೂ ಮುಸ್ಲಿಂ ಮಹಿಳೆಯರ ಮಾನ ಹರಣದ ಮಾತುಗಳನ್ನು ಆಡಿದ್ದು ಮತ್ತು ಮುಸ್ಲಿಂ ಮಹಿಳೆಯರನ್ನು ಬಲಾತ್ಕಾರದ ಮತಾಂತರ ನಡೆಸಲು ಪ್ರೇರಣೆ ನೀಡಿರುವ‌ ಬಗ್ಗೆ ಇದೀಗಾಗಲೇ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಖಾದರ್ ಅವರು ದೂರು ದಾಖಲಿಸಿರುತ್ತಾರೆ.

ಆದರೆ ಕುಂದಾಪುರ ಚೈತ್ರಾ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ಬಂಧಿಸದೆ ಇರದಿರುವುದು ಸಂಘಪರಿವಾರ ಮತ್ತು ಪೊಲೀಸ್ ಆಧಿಕಾರಿಗಳೊಂದಿಗೆ ಒಳ ಒಪ್ಪಂದ ಏರ್ಪಟ್ಟಂತೆ ಕಾಣುತ್ತಿದೆ. ಒಂದು ವೇಳೆ ಎರಡು ದಿನಗಳ ಒಳಗಾಗಿ ಚೈತ್ರಳ ಮೇಲೆ ಸೂಕ್ತವಾದ ಎಫ್ಐಆರ್ ದಾಖಲಿಸದಿದ್ದಲ್ಲಿ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು SDPI ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ

By dtv

Leave a Reply

Your email address will not be published. Required fields are marked *

error: Content is protected !!