ಉತ್ತರಪ್ರದೇಶ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ರಿಗೆ ಉತ್ತರಪ್ರದೇಶ ಪೊಲೀಸರು ಇಂದು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇನ್ನು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ ಆಶೀಶ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಂದು ರೈತರಿಗೆ ಡಿಕ್ಕಿ ಹೊಡೆದ ಬೆಂಗಾವಲು ವಾಹನದಲ್ಲಿ ಇದ್ದ ಆಶೀಶ್ ಪಾಂಡೆ ಮತ್ತು ಲವಕುಶ್ ಎಂಬುವರನ್ನು ಇಂದು ಬಂಧಿಸಲಾಗಿದೆ.
ಇವರಿಬ್ಬರೂ ಆಶೀಶ್ ಮಿಶ್ರಾ ಆಪ್ತರೂ ಹೌದು ಎಂದು ಲಖನೌ ರೇಂಜ್ನ ಐಜಿ ಲಕ್ಷ್ಮೀ ಸಿಂಗ್ ತಿಳಿಸಿದ್ದಾರೆ. ಲಖಿಂಪುರ ಖೇರಿಯಲ್ಲಿ ರೈತರತ್ತ ಕಾರು ಹರಿದ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಆಶೀಶ್ ಮಿಶ್ರಾ ಹೇಳಿಕೊಂಡಿದ್ದಾರೆ.
ನಾನು ಘಟನೆ ನಡೆದಾಗ ಲಖಿಂಪುರ ಖೇರಿಯಲ್ಲಿ ಇರಲಿಲ್ಲ. ಬೆಳಗ್ಗೆ 9ಗಂಟೆಯಿಂದಲೂ ಬೇರೆ ಒಂದು ಕಾರ್ಯಕ್ರಮದಲ್ಲಿ ಇದ್ದೆ ಎಂದಿದ್ದಾರೆ. ಹಾಗೇ, ಕೇಂದ್ರ ಸಚಿವ ಅಜಯ್ ಮಿಶ್ರಾ ಕೂಡ ಇದನ್ನೇ ಹೇಳಿದ್ದಾರೆ. ಹಾಗೂ ಒಮ್ಮೆ ನನ್ನ ಪುತ್ರ ಇರುವುದು ಸಾಬೀತಾದರೆ ತಾವು ರಾಜೀನಾಮೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.