ಕುಂಬ್ರ: ಪುತ್ತೂರು ತಾಲೂಕು ನಲ್ಲಿಯೇ ಹೆಸರುವಾಸಿಯಾಗಿರುವಂತಹ ಕುಂಬ್ರ ವರ್ತಕರ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಾಳೆ ಕುಂಬ್ರ ಜಂಕ್ಷನ್’ನಲ್ಲಿ ನಡೆಯಲಿದೆ.
ಸುಮಾರು 18 ವರ್ಷದ ಹಿಂದೆ ಸ್ಥಾಪನೆಗೊಂಡ ಈ ಸಂಘ ಯಶಸ್ವಿ 17 ವರ್ಷ ತುಂಬಿ 18 ನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಸುಮಾರು ವರ್ಷಗಳಿಂದ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಸಮಾಜ ಸೇವೆಯಲ್ಲಿ ತೊಡಗಿಸಿ, ಪರಿಸರದ ವಿದ್ಯುತ್ ಸಮಸ್ಯೆ, ದೂರವಾಣಿ ಸಮಸ್ಯೆ, ಪರಿಸರದ ಸ್ವಚ್ಛತೆ, ಧಾರ್ಮಿಕ ಕಾರ್ಯಕ್ರಮಗಳು, ಶೈಕ್ಷಣಿಕ ಸಮಸ್ಯೆಗಳಿಗೆ, ಕುಂಬ್ರದ ಎಲ್ಲಾ ವರ್ತಕರ ನೋವಿಗೆ ತಕ್ಷಣ ಸ್ಪಂದಿಸುತ್ತಾ ಕಾರ್ಯನಿರ್ವಹಿಸಿಕೊಂಡು ಬಂದಿರುವ ಈ ಸಂಘದ ಸವಿನೆನಪಿಗಾಗಿ ಮೂವರು ಹಿರಿಯ ವರ್ತಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ವರ್ತಕ ಸಂಘದಲ್ಲಿ ಸುಮಾರು ಹದಿನೆಂಟು ವರುಷಗಳಲ್ಲಿ ಸಂಘದ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದವರು .. 10.10.2004 ರಿಂದ 20.07.2010 ಅವಧಿಯವರೆಗೆ ಅಧ್ಯಕ್ಷರಾಗಿ ಶ್ಯಾಂ ಸುಂದರ್ ರೈ ಕೊಪ್ಪಳ ಪ್ರ.ಕಾರ್ಯದರ್ಶಿಯಾಗಿ ಸಂಶುದ್ದೀನ್ ಎ.ಆರ್ ಕಾರ್ಯನಿರ್ವಹಿಸಿದರೆ 20.07.2010 ರಿಂದ 21.12.2013 ರ ಅವಧಿಯಲ್ಲಿ ಅಧ್ಯಕ್ಷರಾಗಿ ಕೆ.ದಿವಾಕರ ಶೆಟ್ಟಿ ಪ್ರ.ಕಾರ್ಯದರ್ಶಿಯಾಗಿ ಹನೀಫ್ ತರಕಾರಿ ಕುಂಬ್ರ ರವರು ಕಾರ್ಯನಿರ್ವಹಿಸಿದ್ದು ನಂತರ 21.12.2013 ರಿಂದ ಅಧ್ಯಕ್ಷರಾಗಿ ಕೆ.ನಾರಾಯಣ ಪೂಜಾರಿ ಕುರಿಕ್ಕಾರ ಹಾಗು ಪ್ರ.ಕಾರ್ಯದರ್ಶಿಯಾಗಿ ಮೆಲ್ವೀನ್ ಮೊಂತೆರೋ ರವರು 17.07.2016 ರವರೆಗೆ ಕಾರ್ಯನಿರ್ವಹಿಸಿದರು. 17.07.2016 ರಿಂದ 31.10.2017 ರವರೆಗೆ ಅಧ್ಯಕ್ಷರಾಗಿ ಸುಂದರ್ ರೈ ಮಂದಾರ ಮತ್ತು ಪ್ರ ಕಾರ್ಯದರ್ಶಿಯಾಗಿ ರಫೀಕ್ ಅಲ್ ರಾಯ ಕಾರ್ಯನಿರ್ವಹಿಸಿದ್ದು 31.10.2017 ರಿಂದ ಅಧ್ಯಕ್ಷರಾಗಿ ಮೆಲ್ವೀನ್ ಮೊಂತೆರೋ ಮತ್ತು ಪ್ರ.ಕಾರ್ಯದರ್ಶಿಯಾಗಿ ರಮೇಶ್ ಆಳ್ವ ಕಲ್ಲಡ್ಕ 10.10.2019 ರವರೆಗೆ ಕಾರ್ಯನಿರ್ವಹಿಸಿದ್ದರು ಪ್ರಸಕ್ತ ಸಾಲಿನಲ್ಲಿ 10.10.2019 ರಿಂದ ಅಧ್ಯಕ್ಷರಾಗಿ ಎಸ್.ಮಾಧವ ರೈ ಕುಂಬ್ರ ಮತ್ತು ಪ್ರ.ಕಾರ್ಯದರ್ಶಿಯಾಗಿ ಅಝರ್ ಷಾ ಕುಂಬ್ರರವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ವರ್ತಕ ಸಂಘ ರಿ.ಕುಂಬ್ರ ಸಾಗಿ ಬಂದ ದಾರಿ
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಪ್ರದೇಶವು ಹಲವು ಸಂಘಟನೆಗಳಿಗಾಗಿ ಇಂದು ಹೆಸರುವಾಸಿಯಾಗಿದೆ . ಸಾಮಾಜಿಕವಾಗಿ , ಧಾರ್ಮಿಕವಾಗಿ , ಶೈಕ್ಷಣಿಕವಾಗಿ ಅನೇಕ ಸಂಘಟನೆಗಳು ಕುಂಬ್ರದಲ್ಲಿ ಮುಂಜಾನೆಯಿಂದ ರಾತ್ರಿ ತನಕ ಅನೇಕ ಕಾಠ್ಯಕ್ರಮಗಳನ್ನು ರೂಪಿಸುತ್ತದೆ. ಈ ಸಮಯದಲ್ಲಿ ವ್ಯಾಪಾರ ನಡೆಸುತ್ತಿದ್ದ ನಾರಾಯಣ ಪೂಜಾರಿ ಕುರಿಕ್ಕಾರ , ಮೆಲ್ವಿನ್ ಮೊಂತೆರೋ ಮತ್ತು ಸಂಶುದ್ದೀನ್ ಇವರು ತಮ್ಮ ಮನಸ್ಸಿನಲ್ಲಿ ಮೂಡಿ ಬಂದ ಕನಸು ಸಂಘಟಿತರಾಗಬೇಕೆಂಬ ಬಯಕೆ . ಅದುವೇ ವರ್ತಕರು ಒಗ್ಗಟ್ಟಾಗಬೇಕೆಂಬ ಕನಸು.
ಈ ಕನಸನ್ನು ಸಾಧಿಸಲು ಆ ದಿನವೇ ಸಂಘಟನೆಯ ರೂವಾರಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಇವರ ಮನೆಯಲ್ಲಿಯೇ ರೂಪರೇಷಗಳನ್ನು ರೂಪಿಸಲಾಯಿತು. ಹೀಗೆ ಒಟ್ಟಾಗಿ ಚಿಂತಿಸಿ ಕೊಪ್ಪಳ ಶ್ಯಾಂ ಸುಂದರ್ ರೈಯವರು ಅಧ್ಯಕ್ಷರಾಗಿ ಮಾಧವ ರೈಯವರು ಉಪಾಧ್ಯಕ್ಷರಾಗಿ ಸಂಶುದ್ದೀನ್ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಕುರಿಕ್ಕಾರ ಜೊತೆ ಕಾರ್ಯದರ್ಶಿಯಾಗಿ ಮೆಲ್ವಿನ್ ಮೆಂತೋರೊ ಕೋಶಾಧಿಕಾರಿಯಾಗಿ 26 ಜನರ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ವರ್ತಕರ ಸಂಘ ಕುಂಬ್ರ ದಿನಾಂಕ 10-10-2004ನೇ ಆದಿತ್ಯವಾರ ಒಳಮೊಗ್ರು ಪಂಚಾಯತ್ ಸಭಾಂಗಣದಲ್ಲಿ ಅಂದಿನ ಪುತ್ತೂರಿ ತಹಶೀಲ್ದಾರರಾದ ಮರಿಯಪ್ಪ ಗೌಡ ಇವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿರುವುದು ಈಗ ಇತಿಹಾಸ.
ಆಗಿನ ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ರಹಿಮಾನ್ , ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ , ಯುವ ಮುಂದಾಳು ಚಂದ್ರಕಾಂತ ಶಾಂತಿವನ ಇವರ ಸಲಹೆಯೊಂದಿಗೆ ಕುಂಬ್ರ ವರ್ತಕರ ಸಂಘ ಒಳಮೊಗ್ರು , ಕೆದಂಬಾಡಿ , ಅರಿಯಡ್ಕ ಗ್ರಾಮಗಳ ಸಂಪರ್ಕ ಸೇತುವಾಗಿ ಕಾರನಿರ್ವಹಿಸುತ್ತಾ ಬಂದಿದೆ. ಕುಂಬ್ರದ ವರ್ತಕರ ಸಂಘ, ಪರಿಸರದ ವಿದ್ಯುತ್ ಸಮಸ್ಯೆ, ದೂರವಾಣಿ ಸಮಸ್ಯೆ, ಪರಿಸರದ ಸ್ವಚ್ಛತೆ, ಧಾರ್ಮಿಕ ಕಾಠ್ಯಕ್ರಮಗಳು, ಶೈಕ್ಷಣಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ತನ್ನ ಇರುವಿಕೆಯನ್ನು ತೋರಿಸಿಕೊಂಡು ಬಂದಿದೆ. ಸಮಾಜದ ಎಲ್ಲಾ ವರ್ಗಗಳ ಸದಸ್ಯರನ್ನೊಳಗೊಂಡ ಈ ಸಂಘ ವಿವಿಧ ಕಾಠ್ಯಕ್ರಮಗಳನ್ನು ನೀಡುತ್ತಿದೆ.
ಮುಖ್ಯವಾಗಿ ವರ್ತಕರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಸಾಮಾಜಿಕವಾಗಿ ಸಮಸ್ಯೆಗಳಿಗೆ ತನ್ನಿಂದಾದ ಸಹಾಯವನ್ನು ತನ್ನ ಕರ್ತವ್ಯವೆಂದು ಭಾವಿಸಿ ನಿರ್ವಹಿಸುತ್ತಿದೆ. ಸಂಘಟನೆಗಳೊಡಗೂಡಿ ಒಂದು ಸಮಾಜ ಸೇವಾ ಸಂಘ ಏನೇನು ಮಾಡಬಹುದೋ ಅದನ್ನೆಲ್ಲಾ ಒಂದು ವರ್ತಕರ ಸಂಘ ಮಾಡುತ್ತಿದೆ. ವರ್ತಕರ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗದೆ , ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಕುಂಬ ವರ್ತಕರ ಸಂಘವು ಒಂದು ಸಮಾಜ ಸೇವಕರ ಸಂಘವಾಗಿದೆ.
ಇದು ಇಡೀ ತಾಲೂಕಿಗೆ ಒಂದು ಮಾದರಿ ಸಂಘಟನೆಯಾಗಿದೆ. ಹೊಟ್ಟೆಪಾಡಿಗಾಗಿ ವ್ಯಾಪಾರ ಅನಿವಾರ್ಯವಾದರೂ ಗ್ರಾಹಕರೇ ನಮ್ಮ ದೇವರೆಂದು ನಂಬಿ ಅವರ ಅನಿವಾದ್ಯತೆಗಳಿಗೆ ಸ್ಪಂದಿಸುವ ಮಹದಾಸೆಯನ್ನು ಹೊತ್ತಿರುವ ಸರ್ವಸದಸ್ಯರು, ಪ್ರತಿಷ್ಠೆ ಬಿಟ್ಟು ಸಾಮಾಜಿಕ ಕಳಕಳಿಯಿಂದ ತಮ್ಮ ಸೇವಾಮನೋಭಾವವನ್ನು ಪರಿಸರದ ಎಲ್ಲಾ ಜನರಿಗೆ ನೀಡಿ ಸೈ ಎನಿಸಿಕೊಂಡು , ಇತರರಿಗೆ ಮಾದರಿಯಾಗಿ ಬೆಳೆಯುತ್ತಿರುವುದು ಹರ್ಷ ತಂದಿದೆ.