ಬೆಂಗಳೂರು: ತಂದೆಯಿಂದಲೇ ಮಗನ ಬರ್ಬರ ಹತ್ಯೆ ನಡೆದಿರುವ ಭೀಕರ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೃಷ್ಣ ಕನ್ವೆನ್ಷನ್ ಹಾಲ್ ಬಳಿ ನಡೆದಿದೆ. ಚಾಕು ಇರಿದು ಮಗ ಸಂತೋಷ್ನನ್ನು ತಂದೆ ಗುರುರಾಜ್ ಹತ್ಯೆಗೈದಿದ್ದಾರೆ.
ತಂದೆ ಹಾಗೂ ಮಗ ಇಬ್ಬರೂ RTO ಕಚೇರಿಯಲ್ಲಿ ಏಜೆಂಟರಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮಗ ಸಂತೋಷ್ ಪ್ರವಾಸಕ್ಕೆ ಹೋಗಿ ಬಂದಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ತಂದೆ ಮಗನನ್ನು ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಗುರುರಾಜ್ ಯತ್ನಿಸಿದ್ದಾನೆ.
ಮಗನನ್ನು ಕೊಲೆ ಮಾಡಿ ಮನೆ ತುಂಬಾ ಚೆಲ್ಲಾಡಿದ್ದ ರಕ್ತವನ್ನು ತೊಳೆದಿದ್ದಾನೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.