dtvkannada

ಪುತ್ತೂರು: ಕಬಕ ಸಮೀಪದ ಮಿತ್ತೂರಿನಲ್ಲಿ ಬೈಕಿಗೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.

ಬೈಕ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ಬೈಕ್ ಸವಾರ ಬೆಟ್ಟಂಪಾಡಿ ರಾಜಮೂಲೆ ನಿವಾಸಿ ಸುರೇಶ್ ನಾಯ್ಕ್ ಎಂದು ತಿಳಿದುಬಂದಿದೆ. ಅ.12ರ ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು ತರುತ್ತಿದ್ದ ವೇಳೆ ಮಿತ್ತೂರು ಮಸೀದಿ ಸಮೀಪದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸಹಿತ ಸುರೇಶ್ ರವರು ಬಿದ್ದಿರುವುದನ್ನು ನೋಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಶ್ ರವರನ್ನು ಕೂಡಲೇ ಆ ದಾರಿಯಾಗಿ‌ ಬಂದ‌ ವಾಹನದ‌ ಮೂಲಕ ಮಂಗಳೂರಿನ ಆಸ್ಪತ್ರೆಗೆ‌ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ‌ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಮಾಹಿತಿ‌ ಸಂಗ್ರಹಿಸಿದೆ. ಆಪಘಾತ ನಡೆದ ವೇಳೆ ಯಾರೂ ನೋಡದಿರುವ ಹಿನ್ನೆಲೆಯಲ್ಲಿ ಘಟನೆ ಹೇಗೆ ನಡೆದಿದೆ ಎನ್ನುವ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!