ಉಪ್ಪಿನಂಗಡಿ: ದೇಶದ ಸೌಹಾರ್ದತೆಗೆ ಉಪ್ಪಿನಂಗಡಿಯಿಂದ ಲಡಾಕ್ ವರೆಗೆ ಸುಮಾರು 2984 ಕಿ.ಮಿ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವ ಮೂಲಕ ಪ್ರಯಾಣದುದ್ದಕ್ಕೂ ದೇಶ ಪ್ರೇಮ, ರಾಷ್ಟ ಧ್ವಜದ ಮಹತ್ವ, ಆಹಾರ ಪೋಲು,ಧಾರ್ಮಿಕ ಸೌಹಾರ್ದತೆ ಮುಂತಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಸಾಧನೆ ನಡೆಸಿ ಮರಳಿ ಮಂಗಳೂರಿನಿಂದ ಮರಳಿ ಉಪ್ಪಿನಂಗಡಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ ಉಪ್ಪಿನಂಗಡಿಯ ಯುವಕರಾದ ನೌಶಾದ್ ಬಿ.ಕೆ.ಎಸ್ ಮತ್ತು ಅಬ್ದುಲ್ ಹಕೀಂ ರವರಿಗೆ ಉಪ್ಪಿನಂಗಡಿ ನೆಕ್ಕಿಲಾಡಿ ಬಳಿ ನೆಕ್ಕಿಲಾಡಿ ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಬ್ದುಲ್ ರಝ್ಝಾಕ್ ಸೀಮಾ ಉಪ್ಪಿನಂಗಡಿ ಯುವಕರ ಸಾಧನೆಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೆಕ್ಕಿಲಾಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಜಿ ಶೇಖಬ್ಬ, ಉಮರುಲ್ ಫಾರುಖ್ ಜುಮಾ ಮಸೀದಿ ನೆಕ್ಕಿಲಾಡಿ ಇದರ ಕೋಶಾಧಿಕಾರಿ ಹಾಜಿ ಹಸೈನಾರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಶೀದ್ ಮಠ, ತೌಶೀಫ್ ಯುಟಿ,ಮೈಸಿದಿ ಇಬ್ರಾಹಿಂ, ಸ್ಥಳೀಯ ನಾಯಕರುಗಳಾದ ಝಕರಿಯ್ಯಾ ಕೊಡಿಪ್ಪಾಡಿ ಯೂಸುಫು ಬೇರಿಕೆ,ಸಲೀಮ್ ಕೊಡಿಪ್ಪಾಡಿ,ಶಬೀರ್ ನಂದಾವರ, ಇಬ್ರಾಹಿಂ ಆಚಿ,ಇಕ್ಬಾಲ್ ಕೆಂಪಿ,ಮಜೀದ್ ಮಠ ,ಶಬೀರ್ ಕೆಂಪಿ ಅಲ್ಲದೇ ಊರಿನ ಹಲವಾರು ನಾಗರಿಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.