ಪುತ್ತೂರು: ಇತ್ತೀಚಿಗೆ ಮೃತಪಟ್ಟ ಸಾಲ್ಮರದಲ್ಲಿ ಟಿಂಬರ್ ಮಾಲೀಕರಾಗಿದ್ದ ಅಬ್ದುಲ್ ರಹಿಮಾನ್ ಬೆಟ್ಟಂಪಾಡಿ ಅವರ ಪತ್ನಿ ಮೈಮೂನಾ(40) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಬೆಟ್ಟಂಪಾಡಿ ನಿವಾಸಿಯಾಗಿದ್ದ ಮೈಮೂನ ಎಂಬವರು ಅನಾರೋಗ್ಯ ನಿಮಿತ್ತ ಮಂಗಳೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇವರ ಪತಿ ಸಾಲ್ಮರ ಸಹನಾ ಮಿಲ್ ಮಾಲೀಕರಾಗಿದ್ದ ಅಬ್ದುಲ್ ರಹಿಮಾನ್ ಬೆಟ್ಟಂಪಾಡಿ ಇತ್ತೀಚಿಗಷ್ಟೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಮೃತರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.