dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರು ತಾಲೂಕಿನ ಮಿತ್ತೂರು ಸಮೀಪದ ಪಾಟ್ರಕೋಡಿಯಲ್ಲಿ ಇಬ್ರಾಹಿಂ ಎಂಬವರ ಮನೆಯಲ್ಲಿ ಒಂದಕ್ಕೊಂದು ಸಂಪರ್ಕದೊಂದಿಗೆ ಪರಸ್ಪರ ಬೇರ್ಪಡದ ರೀತಿಯಲ್ಲಿ ಆರು ಬೆಕ್ಕಿನ ಮರಿಗಳ ಜನನವಾಗಿದ್ದು ಕುತೂಹಲಕಾರಿಯೂ ವಿಚಿತ್ರವಾದ ಘಟನೆಯೊಂದು ನಡೆದಿರುವುದು ವರದಿಯಾಗಿದೆ.

ಇಬ್ರಾಹಿಂ ಅವರ ಮನೆಯಲ್ಲಿ ಸಾಕುತ್ತಿದ್ದ ಬೆಕ್ಕು ಒಂದೇ ಬಾರಿಗೆ 6 ಮರಿಗಳಿಗೆ ಜನನ ನೀಡಿದ್ದು, ಮನೆಯವರು ನೋಡಿದಾಗ 6 ಬೆಕ್ಕಿನ ಮರಿಗಳು ಬೇರ್ಪಡದ ರೀತಿಯಲ್ಲಿ ಇತ್ತು. ಈ ಸುದ್ದಿ ತಿಳಿದ ಪರಿಸರದ ಜನರು ಇದನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಸದ್ಯಕ್ಕೆ ಬೆಕ್ಕಿನ ಮರಿಗಳು ಆರೋಗ್ಯದಿಂದ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದು ಮನೆಯವರು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!