ರಾಮನಗರ: ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆ ಮಾಡಿದ್ದು, ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಗುಡ್ಡ ವೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಇಂದ್ರಮ್ಮ(35)ನನ್ನು ಕೊಲೆ ಮಾಡಿದ ಪತಿ ದೇಸಿಗೌಡ(40) ತಾನು ಕೂಡ ನೇಣಿಗೆ ಶರಣಾಗಿದ್ದಾನೆ.
18 ವರ್ಷದ ಹಿಂದೆ ಇಂದ್ರಮ್ಮ ಮತ್ತು ದೇಸಿಗೌಡ ವಿವಾಹವಾಗಿದ್ದರು. ಈ ಹಿಂದೆ ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ, ಕೊವಿಡ್ ಹಿನ್ನೆಲೆ ಗುಡ್ಡ ವೀರನಹೊಸಹಳ್ಳಿ ಗ್ರಾಮಕ್ಕೆ ವಾಪಾಸ್ ಬಂದು ನೆಲೆಸಿದ್ದರು. ಆದರೆ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದ್ರಮ್ಮ ಮಲಗಿದ್ದ ವೇಳೆ ಚಾಕುವಿನಿಂದ ಕತ್ತು ಕೊಯ್ದು ಪತಿ ಕೊಲೆ ಮಾಡಿದ್ದಾನೆ. ನಂತರ ತನ್ನ ಜಮೀನಿನಲ್ಲಿ ದೇಸಿಗೌಡ ನೇಣಿಗೆ ಶರಣಾಗಿದ್ದಾನೆ.
ಸದ್ಯ ಈ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.