ಉಪ್ಪಿನಂಗಡಿ: ಇಂದು ಮುಂಜಾನೆ ಉಪ್ಪಿನಂಗಡಿಯ ವಳಾಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಯುವಕನೊಬ್ಬ ದಾರುಣ ಮೃತಪಟ್ಟ ಘಟನೆ ನಡೆದಿದ್ದು, ಮೃತಪಟ್ಟ ಯುವಕ ಸಚಿನ್(29) ಆರೆಸ್ಸೆಸ್ ಕಾರ್ಯಕರ್ತ ಎಂದು ತಿಳಿದು ಬಂದಿದೆ.
ಇವರ ಬೈಕ್’ನಲ್ಲಿ ಇತ್ತೀಚಿಗೆ ಬಜರಂಗದಳ ಕಛೇರಿಯಲ್ಲಿ ಹಂಚಿದ್ದ ತ್ರಿಶೂಲ ಧೀಕ್ಷೆ ಆಯುಧ ಪತ್ತೆಯಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೃತ ಯುವಕ ತನ್ನ ಸ್ನೇಹಿತನೊಂದಿಗೆ ಬೈಕ್’ನಲ್ಲಿ ನೆಲ್ಯಾಡಿ ಕಡೆ ತೆರಳುತ್ತಿದ್ದಾಗ ವಿರುದ್ದ ಧಿಕ್ಕಿನಿಂದ ಬಂದ ಮೀನು ಸಾಗಾಟದ ಟೆಂಪೊ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಸಹಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.