ಸಾಂಬಾರತೋಟ: ನೂರಾನಿಯ ಜುಮಾ ಮಸ್ಜಿದ್, ಸಾಂಬಾರತೋಟ ಇದರ ಆಶ್ರಯದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಈದ್ ಮಿಲಾದ್ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ದ್ವಜಾರೋಹಣವನ್ನು ನೂರಾನಿಯ ಜುಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ರವರು ನಡೆಸಿಕೊಟ್ಟರು. ನಂತರ ದುವಾ ಮುಖಾಂತರ ರಾಜ್ಜಾಕ್ ಅಹ್ಸನಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಜಮಾಅತಿನ ಗಣ್ಯ ವ್ಯಕ್ತಿಗಲಾದ ಹಸನ್ ಹಾಜಿ, ಎಸ್ ಕೆ ಖಾದರ್ ಹಾಜಿ, ಎ ಎಸ್ ಅಬ್ದುರ್ರಹ್ಮನ್ ಹಾಜಿ, ಮೂಸ ಕುಂಜಿ, ಎಸ್ ಎಸ್ ಮೂಸ ಹಾಜಿ, ಮಸೀದಿ ಕಾರ್ಯದರ್ಶಿಯಾದ ಮುಹಮ್ಮದ್, ಖಿದ್ಮಾತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಶಾಹುಲ್ ಹಮೀದ್ ಎಸ್ ವೈ ಎಸ್ ಅಧ್ಯಕ್ಷರಾದ ಅಬ್ದುಲ್ಲಾ, ಎಸ್ ಎಸ್ ಎಫ್ ಅಧ್ಯಕ್ಷರಾದ ತಬ್ಸಿರ್, ನಾಸಿರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು,