ಕಡಬ: ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಕೋವಿಡ್ ನಿಯಮ ಪಾಲಿಸಿ ಈದ್ ಮಿಲಾದ್ ಆಚರಣೆ ಮಾಡಲಾಯಿತು. ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಕೆ.ಅಬ್ದುಲ್ ರಝಾಕ್ ಧ್ವಜಾರೋಹಣ ನೆರವೇರಿಸಿದರು.ಬದ್ರಿಯಾ ಜುಮಾ ಮಸೀದಿ ಖತೀಬರಾದ ಸೈಯದ್ ಜುನೈದ್ ಜಿಪ್ರಿ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಪ್ರವಾದಿ ಜೀವನ ಚರ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಆ ಶೈಲಿಯ ದಿನ ಚರಿಯೆಗೆ ಸಮೂಹ ಮುಂದೆ ಬರಬೇಕು. ದೇಶದಲ್ಲಿ ಜಾತ್ಯತೀತ ಮೂಲ್ಯ ಬುಡಮೇಲಾಗುವ ಷಡ್ಯಂತ್ರ ನಡೆಯುತ್ತಿದ್ದು, ಎಲ್ಲಾ ಧರ್ಮಿಯರೊಂದಿಗೆ ಸೌಹಾರ್ದತೆಯ ಜೀವನ ಪ್ರವಾದಿ ಸಂದೇಶ ವಾಗಿತ್ತು.ಎಂದು ಹೇಳಿದರು.
ಬದ್ರಿಯಾ ಮಹಿಳಾ ಶರೀಅತ್ ಕಾಲೇಜು ಮ್ಯಾನೇಜರ್ ಸಿದ್ದೀಕ್ ಫೈಝಿ ಕರಾಯ ಸಂದೇಶ ಭಾಷಣ ಮಾಡಿದರು. ಬದ್ರಿಯಾ ಸ್ಕೂಲ್ ಇದರ ಅಧ್ಯಕ್ಷರಾದ ಅದಂ ಪಿಲಿಕುಡೆಲ್, ಬ್ರದಿಯಾ ಜುಮಾ ಮಸೀದಿ ಇದರ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಕಿಡ್ಸ್, ಕಾರ್ಯದರ್ಶಿ ಸಿರಾಜಿ ಬಡ್ಡಮೆ ಸದಸ್ಯರಾದ ಪುಡಿಕುಂಙಿ ನೀರಾಜೆ, ಯುಸೂಫ್ ನೀರಾಜೆ ಹನೀಫ್ ಅಕ್ಕರೆ, ಇಸಾಕ್ ಕೆಮ್ಮಾರ, ಝಕಾರಿಯಾ ಮುಸ್ಲಿಂಯಾರ್, ನಝೀರ್ ನೀರಾಜೆ, SKSSF ಇದರ ಅಧ್ಯಕ್ಷರಾದ ಬಿ.ಆರ್. ಅಬ್ದುಲ್ ಖಾದರ್, SKSSF ಕಾರ್ಯದರ್ಶಿ ಎನ್ ಸಿದ್ದೀಕ್, ಹಾಗೂ ಮದ್ರಸ ಅಧ್ಯಾಪಕ ವೃಂದದವರು, ಮದ್ರಸ ವಿದ್ಯಾರ್ಥಿಗಳು ಗಣ್ಯರು ಉಪಸ್ಥಿತರಿದ್ದರು