ಉಳ್ಳಾಲ: ಇಂದು ಸಂಜೆ 4:30ರ ಸುಮಾರಿಗೆ ಉಳ್ಳಾಲ ಕೋಡಿ ರಸ್ತೆಯ ಲಕ್ಷ್ಮಿ ನರಸಿಂಹ ದೇವಸ್ಥಾನದ ಬಳಿ ಹರೀಶ್ ಎಂಬವರಿಗೆ ಸ್ವ ಸಮುದಾಯದವನಾದ ಮೊಗವೀರ ಪಟ್ನದ ವಿಶಾಲ್ ಎಂಬುವನು ಎದೆಗೆ ಮತ್ತು ಕೈಗೆ ಚೂರಿ ಇರಿದ ಘಟನೆ ನಡೆದಿತ್ತು. ತೀವ್ರ ಇರಿತಕ್ಕೊಳಪಟ್ಟು ರಸ್ತೆಯಲ್ಲಿ ಬಿದ್ದು ನರಳಿ ಸಹಾಯವನ್ನು ಯಾಚಿಸುತಿದ್ದ ಹರೀಶ್ ರನ್ನು ಅದೇ ದಾರಿಯಲ್ಲಿ ಸ್ಕೂಟರ್ ನಲ್ಲಿ ತೆರಳುತಿದ್ದ ಉಳ್ಳಾಲ SDPI ನಗರ ಸಮಿತಿಯ ಉಪಾಧ್ಯಕ್ಷರಾದ ಇಮ್ತಿಯಾಜ್ ಕೋಟೆಪುರ ಮತ್ತು ಉಳ್ಳಾಲ ಕೋಡಿ ಬ್ರಾಂಚ್ ಅಧ್ಯಕ್ಷರಾದ ಲತೀಫ್ ಪಾಪು ರವರು ಕಂಡು ಮಾನವೀಯತೆಯ ನೆಲೆಯಲ್ಲಿ ಹರೀಶ್ ರನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಒಂದು ಘಟನೆಯಲ್ಲಿ ಹರೀಶರಿಗೆ ಸಹಾಯ ಮಾಡಿದ SDPI ಕಾರ್ಯಕರ್ತರನ್ನು ಅಲ್ಲಿನ ನಾಗರಿಕರು ಮುಕ್ತ ಕಂಠದಿಂದ ಪ್ರಸಂಶೆ ಗೈದಿರುತ್ತಾರೆ.ಕೋಮುವಾದವೇ ತುಂಬಿಕೊಂಡಿರುವಂತಹ ಈ ಸಮಾಜದಲ್ಲಿ ಮಾನವೀಯತೆ ಇನ್ನೂ ಕೂಡ ಜೀವಂತವಿದೆ ಎನ್ನುವುದನ್ನು ಮುಹಮ್ಮದ್ ( ರ.ಸ ) ರವರ ಜನ್ಮ ದಿನಾಚರಣೆಯಂದು ತೋರಿಸಿರುವುದು ಸಾರ್ವಜನಿಕವಾಗಿ ಶ್ಲಾಘನೆ ವ್ಯಕ್ತವಾಗಿದೆ.

SDPI ಕಾರ್ಯಕರ್ತರ ಈ ಸ್ಪಂದನೆಗೆ ಉಳ್ಳಾಲ ನಗರ ಸಮಿತಿ ಮತ್ತು ಮಂಗಳೂರು ಕ್ಷೇತ್ರ ಸಮಿತಿ ಮೆಚ್ಚುಗೆ ವ್ಯಕ್ತ ಪಡಿಸಿದೆ.ವಿಷಯ ತಿಳಿದ SDPI ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾದ ಸುಹೈಲ್ ಉಳ್ಳಾಲ ಮತ್ತು ಇತರ ನಾಯಕರು ಆಸ್ಪತ್ರೆಗೆ ತೆರಳಿ ಕುಟುಂಬದೊಂದಿಗೆ ಸಂಪರ್ಕಿಸಿ ನೆರವು ನೀಡುವ ಮತ್ತು ರಕ್ತ ಬೇಕಾದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.


