ಪುತ್ತೂರು: ಕುಂಬ್ರದ ಹೃದಯ ಭಾಗದಲ್ಲಿರುವ ಅಕ್ಷಯ ಆರ್ಕೇಡ್’ನಲ್ಲಿ ಸಂಪತ್ ಕುಮಾರ್ ಮಾಲಕತ್ವದ ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಶೋರೋಮ್ ಇಂದು ಶುಭಾರಂಭಗೊಂಡಿತು. ಸುಸಜ್ಜಿತ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ಬಹುದೊಡ್ಡ ಮಳಿಗೆ ಕುಂಬ್ರದಲ್ಲಿ ಶುಭಾರಂಭಗೊಂಡಿದ್ದು, ಗ್ರಾಹಕರಿಗೆ ವಿಶೇಷ ಆಫರ್’ಗಳ ಮೂಲಕ ಹಲವು ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ.
ರಿಬ್ಬನ್ ಕಟ್ ಮಾಡುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಳೆದ 9 ವರ್ಷಗಳಿಂದ ಪರ್ಪುಂಜದಲ್ಲಿ ಉತ್ತಮ ಕ್ವಾಲಿಟಿಯ ವಸ್ತುಗಳನ್ನು ನೀಡುತ್ತಾ ಬಂದಿರುವ ಅತಿಥಿ ಇಲೆಕ್ಟ್ರಾನಿಕ್ಸ್ ನ ಹೊಸ ಮಳಿಗೆಗೆ ಸಾರ್ವಜನಿಕರು ಇನ್ನಷ್ಟು ಪ್ರೋತ್ಸಾಹ ನೀಡುವುದರ ಮೂಲಕ ಸಹಕರಿಸಬೇಕು ಎಂದು ಕೇಳಿಕೊಂಡರು.ಮನೆಯ ಅಲಂಕಾರಕ್ಕೆ ಹಾಗೂ ಅಗತ್ಯತೆಗೆ ಬೇಕಾದ ಎಲ್ಲಾ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗಿದ್ದು ಕುಂಬ್ರದ ಅಭಿವೃದ್ದಿಗೆ ಇನ್ನಷ್ಟು ಕೊಡುಗೆ ಎಂದರು.
ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾದ ಸಂಜೀವ ಪೂಜಾರಿ ಕೊರೇಲು ಅತಿಥಿ ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಸಿದರು. ನಂತರ ಮಾತನಾಡಿದ ಅವರು, ಬಡಕುಟುಂಬದಿಂದ ಬಂದು ತನ್ನ ಸತತ ಪರಿಶ್ರಮದಿಂದ ಉಧ್ಯಮ ಕ್ಷೇತ್ರದಲ್ಲಿ ಸಾಧನೆಯ ಶಿಖರವನ್ನು ಏರಿ ಎಲ್ಲರ ವಿಶ್ವಾಸವನ್ನು ಗಳಿಸಿ ಸುಮಾರು 9 ವರ್ಷದಿಂದ ಕಾರ್ಯಾಚರಿಸುತ್ತಿರುವ ಅತಿಥಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವದಿಸಿದರು.
ಮೊದಲ ಖರೀದಿಯನ್ನು ಮಾಡಿ ನಗದನ್ನು ಮಾಲಕರ ಕೈಗೆ ನೀಡಿ, ಗ್ರಾಮ ಮಟ್ಟದಲ್ಲಿ ಇಷ್ಟುದೊಡ್ಡ ಸಂಸ್ಥೆ ಆರಂಭಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಹತ್ತಾರು ಶಾಖೆಗಳು ತೆರೆದುಕೊಳ್ಳಲಿ ಎಂದು ಶುಭಹಾರೈಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಕಾಂಪ್ಲೆಕ್ಸ್ ಮಾಲಕ ಜಯಂತ್ ನಡುಬೈಲ್ ಮಾತನಾಡಿ, ಉತ್ತಮ ಕ್ವಾಲಿಟಿ, ಅತ್ಯುತ್ತಮ ಸರ್ವೀಸ್ ಮತ್ತು ನಗುಮೊಗದ ಸೇವೆಯೊಂದಿಗೆ ಅತಿಥಿ ಮಳಿಗೆ ಗ್ರಾಹಕರ ಮನೆಮಾತಾಗಿದ್ದು, ಪರ್ಪುಂಜದಲ್ಲಿ ಸುಮಾರು 9 ವರ್ಷಗಳಿಂದ ಶ್ರಮಪಟ್ಟು ಯಶಸ್ವಿಯಾದ ಸಂಪತ್ ಕುಮಾರ್ ರವರು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳು ತೆರೆಯುವ ಮೂಲಕ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಶುಭಹಾರೈಸಿದರು.
ತುಳು ಚಲನಚಿತ್ರ ನಟಿ ನವ್ಯ ಪೂಜಾರಿ ಮಾತನಾಡಿ, ಅತಿಥಿ ಮಳಿಗೆ ಇನ್ನಷ್ಟು ಅಭಿವೃದ್ಧಿ ಹೊಂದಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಶಾಖೆಗಳು ಆರಂಭವಾಗಲಿ ಎಂದು ಶುಭನುಡಿದರು. ಕುಂಬ್ರ ವರ್ತಕ ಸಂಘದ ಅಧ್ಯಕ್ಷ ಮಾಧವ ರೈ ಶುಭಹಾರೈಸಿದರು.ಬಂದಂತಹ ಎಲ್ಲಾ ಗಣ್ಯರಿಗೆ ಅತಿಥಿಯ ಮಾಲಕ ಸಂಪತ್ ಕುಮಾರ್ ರವರು ಶಾಲು ಹಾಕಿ ಗೌರವಿಸಿದರು. ಶಶಿಧರ ಕಿನ್ನಿಮಜಲು ಸ್ವಾಗತಿಸಿ, ಪ್ರಜ್ಞಾ ಓಡಿಲ್ನಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ, ರಂಗಭೂಮಿ ಕಲಾವಿದ ಸುಂದರ್ ರೈ ಮಂದಾರ, ಪುತ್ತೂರು ಬ್ರಹ್ಮಶ್ರಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಚಲನಚಿತ್ರ ನಟಿ ಅಂಕಿತ ಪಟ್ಲ, ಪುರಂದರ ರೈ ಮಿತ್ರಂಪಾಡಿ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಮಮತಾ ಕೆ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು.