ಸುಳ್ಯ: ಕಲ್ಲುಗುಂಡಿ ಮುಹ್ಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ. ಅ) ರವರ 1496ನೇ ಜನ್ಮದಿನಾಚರಣೆ ನಿನ್ನೆ ಮಂಗಳವಾರ ಸರಳವಾಗಿ ಆಚರಿಸಲಾಯಿತು. ಬೆಳಿಗ್ಗೆ ಗಂಟೆ 8:30ಕ್ಕೆ ಜಮಾಅತಿನ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟ್ಯಾರ್ ದ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖತೀಬರಾದ ಅಹ್ಮದ್ ನಈಂ ಫೈಝಿ ಉಸ್ತಾದರು ದುಃಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಉಸ್ತಾದರುಗಳ, ಮದರಸದ ವಿದ್ಯಾರ್ಥಿಗಳು, ಜಮಾಅತಿನ ಸದಸ್ಯರುಗಳು, ಜಮ್ಹಾತಿನ ಅಧೀನದಲ್ಲಿರುವ ವಿವಿಧ ಅಂಗಸಂಸ್ಥೆಗಳ ಸದಸ್ಯರು, ಗೌರವಾನ್ವಿತ ಜಮಾ ಅತ್ ಸದಸ್ಯರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿ ಪೆಸ್ಟ್ ಮದ್ಯಾಹ್ನ 2:00 ಗಂಟೆಗಳ ತನಕ ನಡೆಸಲಾಯಿತು. ನಂತರ ಮೌಲೀದ್ ಪಾರಾಯಣ ಸಮಾರೋಪ ಸಮಾರಂಭ ಬಹುಮಾನ ವಿತರಣೆ ನಡೆಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಬ್ಬಾಸ್ ಸಂಟ್ಯಾರ್ ವಹಿಸಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜೀ ಕೆ ಹಮೀದ್ ಜಮ್ಹಾತಿನ ಪ್ರದಾನ ಕಾರ್ಯದರ್ಸಿ ರಝಾಕ್ ಸೂಪರ್ ಸಿ ಡಬ್ಲ್ಯೂ ಯಫ್ ಅಧ್ಯಕ್ಷ ನಿಝಾಮ್ ದೊಡ್ಡಡ್ಕ ಸಿ ಯಫ್ ಸಿ ಅಧ್ಯಕ್ಷ ಹಸೃನಾರ್ ಚಟ್ಪೆಕಲ್ ಜಮ್ಹಾತ್ ಸಮಿತಿಯ ಪದಾದಿಕಾರಿಗಳು ಮದರಸದ ಎಲ್ಲಾ ಅದ್ಯಾಪಕ ವೃಂದದವರು ಬಾಗಿಗಳಾಗಿದ್ದರು. ಸ್ವಾದಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಸದರ್ ಮುಹಲ್ಲಿಂ ನಾಸಿರ್ ಫೈಝಿ ಉಸ್ತಾದರು ವಂದಿಸಿದರು. ಕೊನೆಯಲ್ಲಿ ಬಹುಃ ಅಹಮದ್ ನಹೀಂ ಫೈಝಿ ಉಸ್ತಾದರ ದುಃಆ ದೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು