ಪೇರಡ್ಕ, ಅ.20: ತೆಕ್ಕಿಲ್ ಮೊಹಮ್ಮದ್ ಹಾಜಿ ಸ್ಮರಣಾರ್ಥ ತಕ್ವೀಯತುಲ್ ಇಸ್ಲಾಂ ಮದ್ರಸ ಹಾಗು ಹಾಯಾತುಲ್ ಇಸ್ಲಾಮ್ ಮದ್ರಸ ಪೇರಡ್ಕ-ಗೂನಡ್ಕ ಮದರಸ ವಠಾರದಲ್ಲಿ ಪ್ರವಾದಿ ಪೈಗಂಬರ್ (ಸ ಅ) ರವರ 1496ನೇ ಜನ್ಮ ದಿನವನ್ನು ಅಧ್ಯಕ್ಷರಾದ ಎಸ್. ಆಲಿಹಾಜಿ ಯವರ ನೇತ್ರತ್ವದಲ್ಲಿ ನಿನ್ನೆ ಬೆಳಿಗ್ಗೆ 8:30ಕ್ಕೆ ಸರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದ್ವಜಾರೋಹಣದೊಂದಿಗೆ ಉದ್ಘಾಟನೆ ಮಾಡಲಾಯಿತು. ರಿಯಾಝ್ ಪೈಝಿ ಪೇರಡ್ಕ ಇವರ ನೇತ್ರತ್ವದಲ್ಲಿ ಹಜ್ರತ್ ವಳಿಯುಲ್ಲಾಹಿ ಪೇರಡ್ಕ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಗೈಯ್ಯಲಾಯಿತು. ಹಾಜಿ ಮೊಹಮ್ಮದ್ ತೆಕ್ಕಿಲ್ ಸಬಾಭವನದಲ್ಲಿ ಮಾತನಾಡಿದ ಟೀ. ಎಮ್ ಶಹೀದ್ ತೆಕ್ಕಿಲ್ ಇವರು ಪೈಗಂಬರ್ ರವರ ಚೆರ್ಯೆಯನ್ನು ಹಿಂಬಾಲಿಸಿ ಬದುಕಬೇಕು ಆಗ ಮಾತ್ರ ಒಂದು ಒಳ್ಳೆಯ ಮನುಶ್ಯನಾಗಲು ಸಾಧ್ಯವೆಂದು ಹೇಳಿ ಯುವಕರಿಗೆ ಸ್ಪೂರ್ತಿಯಾಗಿ ಮಾತನಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೀ.ಕೆ ಹಮೀದ್ ರವರು, ಪೈಗಂಬರ್ರವರ ಚೆರ್ಯೆಯನ್ನು ಜೀವನಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಹಾಗೂ ಊರಿನ ಅಭಿವೃದ್ಧಿಯ ಬಗ್ಗೆ ಶ್ಲಾಗಿಸಿದರು. ನಂತರ ಮದ್ರಸ ಮಕ್ಕಳ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮಗಳು ಕೋವಿಡ್-19 ಇದರ ನಿಯಮಾನುಸಾರದಂತೆ ಸರಳವಾಗಿ ಆಚರಿಸಲಾಯಿತು.
ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರಾದಂತ ಎಸ್. ಆಲಿಹಾಜಿ, ಗೌರವಧ್ಯಕ್ಷರಾದ ಟೀ. ಎಮ್ ಶಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೀ. ಕೆ ಹಮೀದ್, ಖತೀಬರಾದ ರಿಯಾಜ್ ಪೈಝಿ ಎಮ್ಮೆಮ್ಮಡು, ಮುದರ್ರಿಸ್ ನೂರುದ್ಧಿನ್ ಅನ್ಸಾರಿ, ಹಾಜಿ ಇಬ್ರಾಹಿಂ ಕರಾವಳಿ, ಅಬ್ಬಾಸ್ ಪಾಂಡಿ ಮೊದಲಾದವರು ಉಪಸ್ಥಿತರಿದ್ದರು