ಪುತ್ತೂರು : ಪುತ್ತೂರು ಗ್ರಾಮಾಂತರ ಠಾಣೆಯಾದ ಸಂಪ್ಯ ಠಾಣೆಯ ಒರ್ವ ಎಎಸೈಯನ್ನು ಹೋಲುವ ವ್ಯಕ್ತಿಯು ಆರೆಸ್ಸೆಸ್ ಸಮವಸ್ತ್ರ ಧರಿಸಿ ನಿಂತುಕೊಂಡಿರುವ ಫೋಟೊವೊಂದು ಕಳೆದ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ.
ಈ ಫೋಟೋದಲ್ಲಿರುವ ಒಬ್ಬ ವ್ಯಕ್ತಿ ಮೂಲತಃ ಸುಳ್ಯದವಾರಾಗಿದ್ದು , ಸದ್ಯ ಸಂಪ್ಯ ಠಾಣೆಯಲ್ಲಿ ಎಎಸೈ ಆಗಿರುವ ನಾರಾಯಣ ಗೌಡ ಅವರನ್ನು ಹೋಲುತ್ತಿರುವುದೇ ಇಷ್ಟೆಲಾ ಚರ್ಚೆಗೆ ಮುಖ್ಯ ಕಾರಣ ಎನ್ನಬಹುದು.
‘ ಸಂಪ್ಯ ಪೊಲೀಸ್ ಅಧಿಕಾರಿ ಆರೆಸ್ಸೆಸ್ ಸಮವಸ್ತ್ರದಲ್ಲಿ ‘ ಎಂಬ ಬರಹದಡಿಯಲ್ಲಿ ಈ ಫೋಟೊ ಭಾರೀ ವೈರಲ್ ಆಗುತ್ತಿದ್ದು. ಫೋಟೋದಲ್ಲಿ ಮೂವರು ಕಾಣುತ್ತಿದ್ದು , ಒಬ್ಬರು ನಾರಾಯಣ ಗೌಡ ಅವರನ್ನು ಹೋಲುತ್ತಿದ್ದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ನಾರಾಯಣ ಗೌಡ “ ನಾನು ಕಳೆದ 6 ವರ್ಷಗಳಿಂದ ಸಂಪ್ಯ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದೇನೆ . ಪೊಲೀಸ್ ಇಲಾಖೆಯ ಕೆಲಸವಲ್ಲದೆ ಯಾವತ್ತೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡವನಲ್ಲ . ನನಗೆ ಆಗದ ಯಾರೋ ಕಿಡಿಗೇಡಿಗಳು ಇದನ್ನು ಸೃಷ್ಟಿರಬೇಕು . ನಮ್ಮ ಸರ್ಕಲ್ ಇನ್ಸ್‌ಸ್ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ನಿನ್ನೆ ರಾತ್ರಿ ಈ ಫೋಟೊ ನನ್ನ ಗಮನಕ್ಕೆ ತಂದು ಸ್ಪಷ್ಟನೆ ಕೇಳಿದ್ದರು . ಅದು ನಾನಲ್ಲವೆಂದು ಸ್ಪಷ್ಟಪಡಿಸಿರುವೆ . ನನಗೆ ಆಗದ ಯಾರೋ ಈ ಕೃತ್ಯ ಎಸಗಿರಬೇಕು ” ಎಂದು ತಿಳಿಸಿದ್ದಾರೆ .
ಈ ಬಗ್ಗೆ ದೂರು ದಾಖಲಿಸುವ ಚಿಂತನೆ ಇದೆಯಾ ಎಂಬ ಬಗ್ಗೆ ಕೇಳಿದ್ದಕ್ಕೆ ಈಗ ಹಿರಿಯಾಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ ಅವರು ಸೂಚನೆಯಂತೆ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ . ಸಾಮಾಜಿಕ ಜಾಲ ತಾಣಗಳಲ್ಲಿ ಈ ಫೋಟೊ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು , ಹಿರಿಯ ಅಧಿಕಾರಿಗಳು ಈ ಬಗ್ಗೆ ಯಾವ ರೀತಿಯಾಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ನೋಡಬೇಕಿದೆ.