ಪುತ್ತೂರು, ಅ.22: SDPI ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಆಗಿರುವ ಘಟನೆ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಇಂದು ರಾತ್ರಿ ನಡೆದಿದೆ.
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಾಟ್ಸಫ್ ಗ್ರೂಪಿನಲ್ಲಿ ನಡೆದ ಚರ್ಚೆ ತಾರಕ್ಕಕ್ಕೇರಿ ಕುಂಬ್ರ ಜಂಕ್ಷನ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. SDPI ಪರ್ಪುಂಜದ ಕಾರ್ಯಕರ್ತರೆನ್ನಲಾದ ಗುಂಪು ಹಾಗೂ ಕುಂಬ್ರ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಕೈ, ಹೆಲ್ಮೆಟ್’ಗಳಲ್ಲಿ ಮಾರಾಮಾರಿ ಯಾಗಿದೆ.
ಹೊಡೆದಾಟದ ಸುದ್ದಿ ತಿಳಿಯುತ್ತಿದ್ದಾಗಲೇ ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣೆ ಪೊಲೀಸರು ಇತ್ತಂಡಗಳನ್ನು ಚದುರಿಸಿದ್ದಾರೆ. ಮೂವರನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಇತ್ತಂಡದವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ಕಾಲಗಳ ಹೊತ್ತು ಕುಂಬ್ರದಲ್ಲಿ ತುಸು ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.