ಪುತ್ತೂರು: ಹಲವಾರು ವರ್ಷಗಳಿಂದ ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಆಕರ್ಷನ್ ಇಂಡಸ್ಟ್ರೀಸ್ ಸಂಸ್ಥೆ ಇಂದು 26ನೇ ವರ್ಷಕ್ಕೆ ದಾಪುಗಾಲಿಟ್ಟಿದೆ. ಯಶಸ್ವಿಯಾಗಿ 26ನೇ ವಾರ್ಷಿಕೋತ್ಸವ ಪೂರೈಸಿದ ಪ್ರಯುಕ್ತ ಗ್ರಾಹಕರಿಗೆ ವಿಶೇಷವಾದ ಆಫರ್’ಗಳನ್ನು ನೀಡುತ್ತಿದೆ.
1996ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಗ್ರಾಹಕರ ಅಭಿರುಚಿಗೆ ಮತ್ತು ಬೇಡಿಕೆಗೆ ತಕ್ಕಂತೆ ವಸ್ತುಗಳನ್ನು ಪೂರೈಸಿ ಜನಮನ್ನನೆ ಗಳಿಸಿದೆ. ಕಳೆದ 26 ವರ್ಷಗಳಿಂದ ಗ್ರಾಹಕರ ನಾಡಿಮಿಡಿತವನ್ನು ಅರಿತುಕೊಂಡು ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯು ವಿಶೇಷ ಆಫರ್’ಗಳ ಮೂಲಕ ಗ್ರಾಹಕರಿಗೆ ಇನ್ನಷ್ಟೂ ಹತ್ತಿರವಾಗಿದೆ.
ಸಿಮೆಂಟ್ ಐಟಮ್ಸ್, ಇಂಟರ್ ಲಾಕ್, ಕಿಟಕಿ, ದಾರಂದ, ತಂತಿಬೇಲಿ, ಕಬ್ಬಿಣ,ಡಾಗ್ ಹೌಸ್ ಮುಂತಾದ ವಿವಿಧ ಉತ್ಪನ್ನಗಳು ಇಲ್ಲಿ ದೊರೆಯಲಿದ್ದು ವಿಶೇಷವಾಗಿ ಆಧುನಿಕತೆಗೆ ತಕ್ಕಂತೆ ಟಿನ್ನಿ ಹೌಸ್ & ರೆಡಿಮೇಡ್ ಕಂಪೌಡ್ ಇಲ್ಲಿನ ವಿಶೇಷತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ರೆಡಿಮೇಡ್ ಮನೆ(ಟಿನ್ನಿ ಹೌಸ್) ಪರಿಚಯಿಸಿದ ಕೀರ್ತಿ ಆಕರ್ಷನ್ ಸಂಸ್ಥೆಗೆ ಸಲ್ಲುತ್ತದೆ.
ಈ ಸಂಸ್ಥೆ ಪ್ರಾರಂಭದಿಂದಲೂ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದೀಗ 26 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಆಕರ್ಷನ್ ಸಂಸ್ಥೆಯು ರೆಡಿಮೇಡ್ ಕಂಪೌಂಡ್ ರೆಡಿವಾಲ್ ಉಚಿತವಾಗಿ ಫಿಕ್ಸ್ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಆಫರ್ ಕೇವಲ 3 ದಿನಗಳಷ್ಟೇ ಇದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಮಾಲಿಕರಾದ ಸಾದಿಕ್ ಹಾಜಿ ಯವರು ತಿಳಿಸಿದ್ದಾರೆ.
ಕಳೆದ 26 ವರ್ಷಗಳಿಂದ ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಆಕರ್ಷನ್ ಇಂಡಸ್ಟ್ರೀಸ್ ಮನೆ ನಿರ್ಮಾಣಕ್ಕೆ ಬಳಸುವ ವಸ್ತುಗಳ ಮಾರಾಟ ಮತ್ತು ಸರ್ವೀಸ್‌ನಿಂದಲೇ ಗ್ರಾಹಕರಿಂದ ನಂಬರ್ ವನ್ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ತಾವೇ ತಯಾರು ಮಾಡಿದ ಉತ್ಪನ್ನ ಮಾರಾಟ ಮಾಡುವುದರೊಂದಿಗೆ ಸರ್ವೀಸ್‌ನಲ್ಲಿ ತನ್ನದೇ ವಿಶೇಷತೆ ಮತ್ತು ವಿಶಿಷ್ಠತೆಗಳನ್ನು ಆಕರ್ಷನ್ ಸಂಸ್ಥೆ ಹೊಂದಿದೆ. ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ನೀಡುವ ಸರ್ವೀಸ್‌ನಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6364143375 ,9341557370 / 72