';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉದಯಪುರ: ಭಾರತ ಮತ್ತು ಪಾಕಿಸ್ತಾನ ತಂಡದ ನಡುವೆ ನಡೆದ ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಇಂಡಿಯಾ ಹೀನಾಯ ಸೋಲನುಭವಿಸಿತ್ತು. ಪಾಕ್ ಗೆಲುವನ್ನು ರಾಜಸ್ಥಾನದ ಶಿಕ್ಷಕಿಯೊಬ್ಬರು ಸಂಭ್ರಮಾಚರಣೆ ಮಾಡಿದ್ದು, ತಮ್ನ ವಾಟ್ಸಪ್ ಸ್ಟೇಟಸ್’ನಲ್ಲಿ ನಾವು ಗೆದ್ದೆವು ಎಂಬ ಅಡಿಬರಹ ಹಾಕಿದ್ದರು.
ಇದೀಗ ಅವರ ಸ್ಟೇಟಸ್ ಸ್ಕ್ರೀನ್ ಶೂಟ್ ವೈರಲ್ ಆಗ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.ಉದಯಪುರದ ನೀರ್ಜಾ ಮೋದಿ ಶಾಲೆಯ ಶಿಕ್ಷಕಿ ನಫೀಸಾ ಅಟ್ಟಾರಿ ಎಂಬವರೇ ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ಶಿಕ್ಷಕಿ. ಅವರು ತನ್ನ ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಪಾಕ್ ತಂಡದ ಚಿತ್ರ ಹಾಕಿ ‘ನಾವು ಗೆದ್ದೆವು’ ಎಂದು ಬರೆದುಕೊಂಡಿದ್ದರು.
ಶಾಲೆಯ ವಿದ್ಯಾರ್ಥಿಯ ಪೋಷಕರೊಬ್ಬರು ಆಕೆಗೆ ನೀವು ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತಿದ್ದೀರಾ ಎಂದು ಕೇಳಿದಾಗ ನಫೀಸಾ ‘ಹೌದು’ ಎಂದು ಉತ್ತರಿಸಿದ್ದಾರೆ. ಆಕೆಯ ವ್ಯಾಟ್ಸಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ವೈರಲ್ ಆದ ಬಳಿಕ ಶಾಲಾ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.