dtvkannada

ಶಾರ್ಜಾ: ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ದ 5 ವಿಕೆಟ್​ಗಳ ಜಯ ಸಾಧಿಸಿದೆ.

ಮೊದಲು ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್​ ಕಲೆಹಾಕಿತು.

ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಪಾಕ್ ತಂಡ ಒಂದು ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅದರಂತೆ 5 ವಿಕೆಟ್ ಕಳೆದುಕೊಂಡಿದ್ದ ಪಾಕ್ ತಂಡಕ್ಕೆ ಅಂತಿಮ 6 ಓವರ್ಗಳಲ್ಲಿ 53 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಜೊತೆಗೂಡಿದ ಅನುಭವಿ ಶೊಯೇಬ್ ಮಲಿಕ್ (26) ಹಾಗೂ ಆಸಿಫ್ ಅಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ 12 ಎಸೆತಗಳಲ್ಲಿ 3 ಸಿಕ್ಸರ್ನೊಂದಿಗೆ 27 ರನ್ ಬಾರಿಸುವ ಮೂಲಕ ಆಸಿಫ್ ಅಲಿ ತಂಡವನ್ನು 18.4 ಓವರ್ನಲ್ಲಿ 135 ರನ್ಗಳ ಗುರಿ ಮುಟ್ಟಿಸಿದರು.

View this post on Instagram

A post shared by ICC (@icc)

ನ್ಯೂಜಿಲೆಂಡ್ ಪರ ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ ಮೊದಲ ಐದು ಓವರ್‌ಗಳಲ್ಲಿ ತಾಳ್ಮೆಯಿಂದ ಆಡಿ 36 ರನ್ ಸೇರಿಸಿದರು. ಆರನೇ ಓವರ್‌ನಲ್ಲಿ ಗಪ್ಟಿಲ್ ವಿಕೆಟ್ ಎಗರಿಸಿದ ರವೂಫ್ ಖಾತೆ ತೆರೆದರು.

ಡೆರಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ, ಇಮದ್ ವಾಸೀಂ ಈ ಜೊತೆಯಾಟ ಬೆಳೆಯದಂತೆ ಮಾಡಿದರು. ಅವರು ಡೆರಿಲ್ ವಿಕೆಟ್ ಪಡೆದು ಜೊತೆಯಾಟವನ್ನೂ ಮುರಿದರು. ಜೇಮ್ಸ್ ನಿಶಾಮ್ ಬೇಗನೆ ಔಟಾದರು.

By dtv

Leave a Reply

Your email address will not be published. Required fields are marked *

error: Content is protected !!