';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಯುವ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣಕ್ಕೆ ಎಲ್ಲ ಕಡೆಯಿಂದಲೂ ಕಂಬನಿ ಮಿಡಿಯುತ್ತಿದೆ. ಸ್ವತಃ ಆರೋಗ್ಯದ ಬಗ್ಗೆ ತುಂಬಾ ತುಂಬಾ ಕಾಳಜಿ ವಹಿಸುತ್ತಿದ್ದ, ವಂಶಪಾರಂಪರ್ಯವಾಗಿಯೂ ಆರೋಗ್ಯ ಕಾಪಾಡಿಕೊಂಡು ಬಂದಿರುವ ಕನ್ನಡ ಚಿತ್ರೋದ್ಯಮದ ದೊಡ್ಮನೆ ಎಂದೇ ಜನಪ್ರಿಯವಾಗಿರುವ ಡಾ. ರಾಜ್ ಕುಮಾರ್ ಕುಟುಂಬದ ಕುಡಿಯೊಂದು ಕೊನೆಯುಸಿರೆಳೆದಿದ್ದು ಮಸಣದ ಹೂವಾಗಿದೆ.
ದಿನಾ ಜಿಮ್ ಮಡುತ್ತಾ, ದೇಹವನ್ನು ದಂಡಿಸುತ್ತಾ, ಅತ್ಯುತ್ತಮ ಆರೋಗ್ಯ ಕಾಪಾಡಿಕೊಂಡುಬಂದಿದ್ದ ಯುವ ನಟ ಪುನೀತ್ ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲಾ ಜಿಮ್ ಕೇಂದ್ರಗಳು ಶುಕ್ರವಾರ ಮತ್ತು ಶನಿವಾರ ಬಂದ್ ಮಾಡಿ, ಅಗಲಿದ ಆತ್ಮೀಯ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿವೆ.