dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್​ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರಭಾವಿ ನಾಯಕರು ಸಂತಾಪ ಸಂದೇಶ ಹಂಚಿಕೊಂಡಿದ್ದಾರೆ. ‘ಕನ್ನಡ ನಟ ಪುನೀತ್ ರಾಜ್​ಕುಮಾರ್ ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯತುಂಬಿದ ಸಾಂತ್ವನಗಳು, ಅವರು ಬೇಗ ಹೊರಟುಹೋದರು’ ಎಂದು ರಾಹುಲ್ ಗಾಂಧಿ ಭಾವುಕ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ..

— Rahul Gandhi (@RahulGandhi) October 29, 2021

ಪುನೀತ್ ರಾಜ್​ಕುಮಾರ್​ ನಿಧನದಿಂದ ನನಗೆ ತುಂಬಾ ದುಃಖವಾಗಿದೆ. ಕನ್ನಡ ಸಿನಿಮಾದ ಪ್ರಮುಖ ನಟ ಅವರು. ಅವರ ಕುಟುಂಬಕ್ಕೆ ನನ್ನ ಹೃದಯತುಂಬಿದ ಸಾಂತ್ವನಗಳು’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

ಪುನಿತ್ ನಿಧನದ ನಂತರ ಟ್ವೀಟ್ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನದ ಸುದ್ದಿ ತಿಳಿದು ಬೇಸರವಾಯಿತು. ನಮ್ಮ ಮತ್ತು ರಾಜ್​ಕುಮಾರ್ ಕುಟುಂಬದ ನಡುವೆ ಹಲವು ದಶಕಗಳ ಒಡನಾಟವಿದೆ. ವೈಯಕ್ತಿಕವಾಗಿಯೂ ಇದು ನನಗೆ ದೊಡ್ಡ ನಷ್ಟ. ತಾರಾ ನಟನಾಗಿದ್ದರೂ ವಿನಯವನ್ನು ಎಂದಿಗೂ ಕಳೆದುಕೊಂಡಿರಲಿಲ್ಲ. ನನ್ನ ತಂದೆ ನಿಧನರಾದಾಗ ಪುನೀತ್ ಮನೆಗೆ ಭೇಟಿ ನೀಡಿ ಗೌರವಿಸಿದ್ದು ಇಂದಿಗೂ ನನಗೆ ನೆನಪಿದೆ. ಕನ್ನಡ ಸಿನಿಮಾರಂಗ ದೊಡ್ಡ ಪ್ರತಿಭಾವಂತ ನಟನನ್ನು ಕಳೆದುಕೊಂಡಿದೆ. ಪುನೀತ್ ಅವರ ಕುಟುಂಬ ಹಾಗೂ ಕರ್ನಾಟಕದ ಜನರಿಗೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರ ಪ್ರದೇಶದ ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಟ್ವೀಟ್:

ನರೇಂದ್ರ ಮೋದಿ ಟ್ವೀಟ್

ಪುನೀತ್ ರಾಜ್ಕುಮಾರ್ ನಿಧನಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ ಗೆ ಸಂತಾಪ ಪತ್ರ ಬರೆದಿದ್ದಾರೆ.

ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್ರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯಬಿಟ್ಟು ನನ್ನ ಸಂತಾಪವನ್ನು ತಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಮಾನವತಾವಾದಿಯನ್ನು ಕಳೆದುಕೊಂಡಿದೆ. ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ದಿ. ರಾಜ್ಕುಮಾರ್ರ ಹಿರಿಯ ಮಗನಾದ ನೀವು ಈ ಕಹಿ ಗಳಿಗೆಯಲ್ಲಿ ಆತ್ಮಸ್ಥರ್ಯ ತುಂಬಿಕೊಂಡು ಕುಟುಂಬಸ್ಥರೊಂದಿಗೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ಎಂ.ಕೆ ಸ್ಟಾಲಿನ್ ಅಪ್ಪುವನ್ನು ಸಹೋದರ ಎಂದೇ ಸಂಬೋಧಿಸಿ ಶಿವರಾಜ್ ಕುಮಾರ್ಗೆ ಸಂತಾಪ ಪತ್ರ ಬರೆದಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!