ಪುತ್ತೂರು, ಅ.31: ಮುಹಿಯದ್ದೀನ್ ಜುಮಾ ಮಸೀದಿ ಶೇಖಮಲೆ ಹಾಗೂ ಕಿದ್ಮತುದ್ದೀನ್ ಯಂಗ್’ಮೆನ್ಸ್ ಅಸೋಸಿಯೇಶನ್ ಶೇಖಮಲೆ ಇದರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಿಲಾದುನ್ನೆಬಿ ಕಾರ್ಯಕ್ರಮ ಹಾಗೂ ಮದರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮವು ನಿನ್ನೆ ರಾತ್ರಿ ಶೇಖಮಲೆಯ ಮದರಸ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಉಪಾಧ್ಯಕ್ಷರಾದ ಎಸ್ ಅಬ್ಬಾಸ್ ಶೇಖಮಲೆ ವಹಿಸಿದ್ದರು. ಪ್ರಾಸ್ತಾವಿಕ ಭಾಷಣ ಮಾಡಿದ ಶೇಖಮಲೆ ಜಮಾಅತ್ ಕಾರ್ಯದರ್ಶಿ ಎಸ್ ಪಿ ಬಶೀರ್, ಕಾರ್ಯಕ್ರಮದ ಯಶಸ್ವಿನ ಬಗ್ಗೆ ಕೊಂಡಾಡಿ, ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದರು. ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಲು ರಾತ್ರಿ ದುಡಿದ ಯಂಗ್ ಮೆನ್ಸ್ ಯುವಕರಿಗೆ ಮೆಚ್ಚುಗೆ ಸೂಚಿಸಿದರು.
ಶೇಖಮಲೆ ಮುದರ್ರಿಸ್ ಅಬ್ದುಲ್ ರಹಿಮಾನ್ ಬಾಖವಿ ದುಃಆ ನೆರವೇರಿಸಿದರು.ಮದರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮವನ್ನು ಶೇಖಮಲೆ ಮದರಸ ಸದರ್ ಉಸ್ತಾದರಾದ ಕಬೀರ್ ಅಮಾನಿ, ಉಸ್ಮಾನ್ ಮುಸ್ಲಿಯಾರ್, ಹನೀಫ್ ಲತೀಫಿ, ಆರೀಫ್ ಮದನಿ ಉಸ್ತಾದರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಬಹಳ ಅಚ್ಚುಕಟ್ಟಾಗಿ ನಡೆದ ಮಕ್ಕಳ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಸ್ಮಾಯಿಲ್ ಹಾಜಿ ಕೌಡಿಚಾರ್ ರವರು ಬಹುಮಾನ ವಿತರಿಸಿದರು.
ಮಕ್ಕಳಿಗಾಗಿ ನಡೆದ ಹಲವು ಸ್ಪರ್ದೆಯಲ್ಲಿ ತೀರ್ಪುಗಾರರಾಗಿ ಅಲೀಂ ಮದನಿ, ನಝೀರ್ ಎಸ್ ಪಿ, ಮಹ್ರೂಫ್, ರಶೀದ್ ಶೇಖಮಲೆ, ಅಝರ್ ಷಾ ಕುಂಬ್ರ, ಸಾಬಿತ್ ಬೊಲ್ಲಾಡಿ, ಎಸ್ ಪಿ ಶರೀಫ್, ಸತ್ತಾರ್ ಪಿ.ಎಂ, ಹಾಶಿಂ ಪೈಚಾರ್, ಸಾಬಿತ್ ಕುಂಬ್ರ ರವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಬಶೀರ್ ಹಾಜಿ ಶೇಖಮಲೆ, ಸುಲೈಮಾನಿ ಹಾಜಿ ಶೇಖಮಲೆ, ಬಶೀರ್ ಕೌಡಿಚ್ಚಾರ್, ಮಹಮ್ಮದ್ ಬೊಲ್ಲಾಡಿ, ಎಸ್ ಎಂ ಮಹಮ್ಮದ್ ಕುಂಞಿ, ಲತೀಫ್ ಟೈಲರ್, ಯಂಗ್ ಮೆನ್ಸ್ ಅಧ್ಯಕ್ಷರಾದ ರಾಝಿಕ್ ಕುಂಬ್ರ, ಮಜೀದ್ ಅಲಂಗೂರು, ಬಾತಿಶ್ ಕುಂಬ್ರ ಹಾಗೂ ಯಂಗ್ ಮೆನ್ಸ್’ನ ಸರ್ವ ಪದಾಧಿಕಾರಿಗಳು, ಜಮಾಅತ್ ಪದಾಧಿಕಾರಿಗಳು, ಊರಿನ ಹಿರಿಯ ಕಿರಿಯ ನಾಗರಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರೂ ಪಾಲ್ಗೊಂಡು ತಮ್ಮ ಮಕ್ಕಳ ಪ್ರತಿಭೆಯನ್ನು ಕಂಡು ಮನ ತನಿಸಿಕೊಂಡರುಯಂಗ್ ಮೆನ್ಸ್ ಕಾರ್ಯದರ್ಶಿ ಅಝರ್ ಅಲಂಗೂರು ಸ್ವಾಗತಿಸಿ, ಅಲ್ತಾಫ್ ಕುಂಬ್ರ ವಂದಿಸಿದರು.ಎಸ್ ಪಿ ನಝೀರ್ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು