ಹುಬ್ಬಳ್ಳಿ: ಆನ್ ಲೈನ್ ವರ್ಕ್ ಆ್ಯಟ್ ಹೋಂ ಈಸಿ ವೇ ಟು ಮೇಕ್ ಮನಿ ಆ್ಯಪ್ ನಲ್ಲಿ ಹಣ ಗಳಿಸುವ ಆಮಿಷಯೊಡ್ಡಿ ಮಹಿಳೆಗೆ 3 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಖಾಸಗಿ ಉದ್ಯೋಗಿ ಹಾಗೂ ಗೋಕುಲ್ ರಸ್ತೆಯ ನಿವಾಸಿ ಎಸ್.ಬಿ.ಪುರದಣ್ಣವರ ವಂಚನೆಗೊಳಗಾದವರು. ಸದ್ಯ ವರ್ಕ್ ಫ್ರಮ್ ಹೋಂ ಇರುವುದರಿಂದ ಪುರದಣ್ಣವರ ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಹಣ ಗಳಿಸುವ ಮತ್ತೊಂದು ದಾರಿ ಕಂಡರಾಯಿತು ಎಂದುಕೊಂಡಿದ್ದರು.
ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರದಣ್ಣವರ ದೂರಿನ ಆಧಾರದ ಮೇಲೆ ವಂಚಕರನ್ನು ಪೊಲೀಸರು ಹುಡುಕಲು ಮುಂದಾಗಿದ್ದಾರೆ.
ಅದರಂತೆ ಈ ಆ್ಯಪ್ ನಲ್ಲಿ ಪುರದಣ್ಣವರ 100 ರೂ. ಹೂಡಿಕೆ ಮಾಡಿದ ವೇಳೆ 110 ರೂ. ಮರಳಿ ಖಾತೆಗೆ ಜಮಾವಾಗಿದೆ. ಇದನ್ನೇ ನಂಬಿದ ಮಹಿಳೆಯ ಫೋನ್ ನಂಬರ್ ಅನ್ನು ವಂಚಕರು ಪಡೆದುಕೊಂಡಿದ್ದಾರೆ. ಈ ವೇಳೆ ನಿಮ್ಮ ಕಮೀಶನ್ ಹಣ ಮತ್ತು ಅಸಲು ಹಣ ಫ್ರೀಜ್ ಆಗಿದೆ ಎಂದು ನಂಬಿಸಿದ್ದಾರೆ. ಬಳಿಕ ಬ್ಯಾಂಕ್ ಖಾತೆಯ ವಿವರ ಪಡೆದು ಹಂತ ಹಂತವಾಗಿ ಒಟ್ಟು 3,00,452 ರೂ. ವಂಚನೆ ಮಾಡಿದ್ದಾರೆ ಎಂದು ಪುರದಣ್ಣವರ ದೂರು ನೀಡಿದ್ದಾರೆ.